Ashwini Gowda : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರಿಗೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಇಬ್ಬರು ಒಂದಾಗುವುದು ಕಿತ್ತಾಡೋದು ಮನೆಯಲ್ಲಿ ಸಾಮಾನ್ಯವಾಗಿ ಬಿಟ್ಟಿತ್ತು. ಬಿಗ್ ಬಾಸ್ ಆರಂಭದಲ್ಲೊಮ್ಮೆ ಗಲಾಟೆ ಮಾಡುವಾಗ ರಕ್ಷಿತಾ ಶೆಟ್ಟಿಗೆ ಅಶ್ವಿನಿ ಗೌಡ ಅವರು’S’ ಕ್ಯಾಟಗಿರಿ ಎಂಬ ಪದವನ್ನು ಬಳಕೆ ಮಾಡಿದ್ದರು. ಈ ಪದದ ವಿಚಾರವಾಗಿ ಮನೆಯ ಹೊರಗಡೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಗ್ ಬಾಸ್ ಮುಕ್ತಾಯದ ಬೆನ್ನಲ್ಲೇ ಮನೆಯಿಂದ ಹೊರಗೆ ಬಂದಿರುವ ಅಶ್ವಿನಿ ಗೌಡ ಅವರು ಈ ಪದ ಬಳಕೆಯ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ.
ಮನೆಯಿಂದ ಹೊರ ಬಂದ ಬೆನ್ನೆಲೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು “ನಾನು ಸಾಮಾಜಿಕ ಹೋರಾಟಗಾತಿ, ಕನ್ನಡ ಹೋರಾಟಗಾರ್ತಿ. ನನಗೆ 20 ವರ್ಷದ ಜರ್ನಿ ಇದೆ. ಜಾತಿ ಅಥವಾ ಇನ್ಯಾವುದೋ ವಿಚಾರದಲ್ಲಿ ಯಾವ ಪದ ಬಳಸಿದರೆ, ಏನಾಗುತ್ತದೆ ಎಂದು ಗೊತ್ತಿದೆ. ಅಷ್ಟು ಪ್ರಜ್ಞೆ ಇರೋ ವ್ಯಕ್ತಿ ನಾನಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ
ಅಲ್ಲದೆ”S ಅಂದರೆ ಶೌಟಿಂಗ್ ಎಂದರ್ಥ, ಕೂಗಾಡ್ತಾರೆ, ಕಿರುಚಾಡಿ ಸ್ಕೋಪ್ ತಗೊಳ್ತಾರೆ ಎನ್ನುವವರಿಗೆ ಶೌಟಿಂಗ್ ಕ್ಯಾಟಗರಿ ಎಂದು ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಕೂಗಾಡುತ್ತಾರೆ, ಆ ವ್ಯಕ್ತಿ ನಾನಲ್ಲ. ಎಸ್ ಕ್ಯಾಟಗರಿ ಬಗ್ಗೆ ಜನರು ಈಗ ಮಾತನಾಡಿರೋದು ನೋಡಿ, ಸಿಲ್ಲಿ ಅನಿಸಿತು. ಈಗ ನನಗೆ ರಕ್ಷಿತಾ ಶೆಟ್ಟಿ ನೇರವಾಗಿ ಗೊತ್ತಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.


