Home » Sandalwood Ramya: ಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಇಲ್ಲಿದೆ ಆ ಸೀಕ್ರೇಟ್‌

Sandalwood Ramya: ಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಇಲ್ಲಿದೆ ಆ ಸೀಕ್ರೇಟ್‌

1 comment

Sandalwood Ramya: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದು ವಿಧಿವಶರಾಗಿದ್ದು, ಸ್ಯಾಂಡಲ್‌ವುಡ್‌ ನಟಿ ರಮ್ಯಾ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟಿ ರಮ್ಯಾ ಸದಾಶಿವನಗರದಲ್ಲಿ ಎಸ್‌ಎಂ ಕೃಷ್ಣ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಭಾವುಕರಾದರು.

ನಟಿ ರಮ್ಯಾ (Sandalwood Ramya) ಮತ್ತು ಎಸ್.ಎಂ.ಕೃಷ್ಣ ಅವರ ನಡುವೆ ಒಂದು ಉತ್ತಮ ನಂಟಿದೆ. ಇದು ರಮ್ಯಾ ಅವರ ತಂದೆಯ ಕಾಲದಿಂದಲೂ ಬಂದಿದೆ. ನಟಿ ರಮ್ಯಾ ಅವರನ್ನು ರಾಜಕಾರಣಕ್ಕೆ ಕರೆತಂದವರು ಎಸ್.ಎಂ.ಕೃಷ್ಣ. ಅವರ ಬಗ್ಗೆ ರಮ್ಯಾ ವಿಶೇಷ ಗೌರವ ಹೊಂದಿದ್ದಾರೆ. ರಮ್ಯಾ ನಿಜವಾದ ಹೆಸರು ದಿವ್ಯ ಸ್ಪಂದನ. ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಎಸ್‌ಎಂ ಕೃಷ್ಣ ಅವರಿಗೆ ಸ್ನೇಹಿಯಾಗಿದ್ದು, ಮಂಡ್ಯ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯೆ ರಂಜಿತಾ ಸಾಕಷ್ಟು ಪ್ರಭಾವಿ ಮಹಿಳೆಯಾಗಿ ಬೆಳೆದಿದ್ದಾರೆ.

ಇನ್ನು ನಟಿ ರಮ್ಯಾ ತಂದೆ ಆರ್‌ಟಿ ನಾರಾಯಣ್ ಸಹ ರಾಜಕೀಯದಲ್ಲಿ ಪ್ರಭಾವಿ ಹೆಸರು. ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಮ್ಯಾ ತಂದೆ ಆರ್‌ಟಿ ನಾರಾಯಣ್ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು. ಆರ್‌ಟಿ ನಾರಾಯಣ್ ಅಪ್ಪಣೆಯಿಲ್ಲದೇ ವಿಧಾನಸೌಧದಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುತ್ತಿರಲಿಲ್ಲ ಎಂಬ ಮಾತು ಆ ಸಮಯದಲ್ಲಿತ್ತು.

ಹೀಗೆ ತಂದೆ, ತಾಯಿಗೆ ಆಪ್ತರಾಗಿದ್ದ ಎಸ್.ಎಂ.ಕೃಷ್ಣ ರಮ್ಯಾ ಅವರ ರಾಜಕೀಯ ಬೆಳವಣಿಗೆಯಲ್ಲೂ ಜೊತೆ ನಿಂತಿದ್ದರು. ಇದೇ ಕಾರಣಕ್ಕೆ ಎಸ್.ಎಂ.ಕೃಷ್ಣ ಅವರ ನಿಧನ ವಾರ್ತೆ ರಮ್ಯಾ ಅವರನ್ನು ಸಹಿಸಲಾಗದಷ್ಟು ದುಃಖಕ್ಕೆ ಗುರಿ ಮಾಡಿದೆ.

You may also like

Leave a Comment