Home » Shefali Jariwala: 42 ರ ಹರೆಯದಲ್ಲೂ ಯಂಗ್‌ ಆಗಿ ಕಾಣಲು ಶೆಫಾಲಿ ಜರಿವಾಲಾ ಯಾವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು? ವೈದ್ಯರಿಂದ ಬಹಿರಂಗ

Shefali Jariwala: 42 ರ ಹರೆಯದಲ್ಲೂ ಯಂಗ್‌ ಆಗಿ ಕಾಣಲು ಶೆಫಾಲಿ ಜರಿವಾಲಾ ಯಾವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು? ವೈದ್ಯರಿಂದ ಬಹಿರಂಗ

by Mallika
0 comments

Shefali Jariwala Anti Ageing Treatment: ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾದರು ಎಂದು ಹೇಳಲಾಗುತ್ತಿದೆ. ಇದಲ್ಲದೆ, ಅವರು ದೀರ್ಘಕಾಲದವರೆಗೆ ಅಪಸ್ಮಾರದಿಂದ ಬಳಲುತ್ತಿದ್ದರು. ಈಗ ಶೆಫಾಲಿ ಸಾವಿನ ನಂತರ, ತನ್ನ 42 ರ ಹರೆಯದಲ್ಲೂ ಆಕೆ ಚಿರಯೌವ್ವನದಂತೆ ಕಾಣಲು ಕೆಲವು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ವೈದ್ಯರು ಬಹಿರಂಗಪಡಿಸಿದ್ದಾರೆ. ಪೊಲೀಸರು ಶೆಫಾಲಿ ಜರಿವಾಲಾ ಅವರ ಪತಿ ಪರಾಗ್ ತ್ಯಾಗಿ ಅವರ ಹೇಳಿಕೆಯನ್ನು ಕೂಡಾ ದಾಖಲಿಸಲಾಗಿದೆ. ಇದರಲ್ಲಿ ನಟಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಶೆಫಾಲಿ ವಯಸ್ಸಾಗದಂತೆ ಕಾಣಲು ಇರುವ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರು, ಅಂದರೆ, ಅವರು ಯೌವನದಿಂದ ಕಾಣಲು ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಶೆಫಾಲಿ ಜರಿವಾಲಾ ಯೌವನದಿಂದ ಕಾಣಲು ಎರಡು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಇವುಗಳಲ್ಲಿ ಒಂದು ವಿಟಮಿನ್ ಸಿ ಮತ್ತು ಇನ್ನೊಂದು ಗ್ಲುಟಾಥಿಯೋನ್. ಆದರೆ, ಈ ಔಷಧಿಗೂ ಹೃದಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಔಷಧಿಗಳನ್ನು ಚರ್ಮದ ಸೌಂದರ್ಯಕ್ಕಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಅವುಗಳ ಪರಿಣಾಮ ಚರ್ಮದ ಮೇಲೆ ಮಾತ್ರ ಇರುತ್ತದೆ.

ಶೆಫಾಲಿ ಜರಿವಾಲಾ ಶುಕ್ರವಾರ ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಇಟ್ಟುಕೊಂಡಿದ್ದರು. ನಿನ್ನೆ ಸಂಜೆ 6 ಗಂಟೆಗೆ  ನಂತರ ಅವರ ರಕ್ತದೊತ್ತಡ ಕಡಿಮೆಯಾಯಿತು. ಇದಾದ ನಂತರ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ನಂತರ  ಶೆಫಾಲಿ  ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು ಮತ್ತು ಅವರ ರಕ್ತದೊತ್ತಡ ಅಧಿಕವಾಯಿತು.

ಶೆಫಾಲಿಯ ರಕ್ತದೊತ್ತಡ ಹೆಚ್ಚಾಗಿದ್ದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ  ಅವರ ಪತಿ ಪರಾಗ್ ತ್ಯಾಗಿ ಅವರನ್ನು ಬೆಲ್ಲಿ ವ್ಯೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಆಸ್ಪತ್ರೆಗೆ ದಾಖಲಾಗುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: India’s jersey: ಭಾರತದ ಜೆರ್ಸಿ ಧರಿಸಿ ಪಾಕಿಸ್ತಾನದ ಬೀದಿಗಳಲ್ಲಿ ಓಡಾಡಿದ ವ್ಯಕ್ತಿ – ಪಾಕ್ ಜನರ ಪ್ರತಿಕ್ರಿಯೆ ಏನು?

You may also like