Kiccha Sudeep: ಬಿಗ್‌ಬಾಸ್ ಸೀಸನ್ ಕನ್ನಡ -12 ರ ಕುರಿತು ಇದೀಗ ಚರ್ಚೆ ನಡೆಯುತ್ತಿದೆ. ದೊಡ್ಮನೆ ಆಟ ಮತ್ತೆ ಸುದ್ದಿಯಲ್ಲಿದೆ. ಈ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಬಿಗ್‌ಬಾಸ್‌ನಿಂದ ಕೆಳಗೆ ಇಳಿಯುತ್ತಾರೆ ಅನ್ನೋ ಸುದ್ದಿ ವ್ಯಾಪಕವಾಗಿ ಚರ್ಚೆ ಆಗಿತ್ತು.
ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್‌ಬಾಸ್ ಎಂದು ಬರೆದಿದ್ದರು. ಕಿಚ್ಚ ಸುದೀಪ್‌ಗಾಗಿಯೇ ಬಿಗ್‌ಬಾಸ್ ನೋಡುವ ಹಲವು ಅಭಿಮಾನಿಗಳು ಇದ್ದಾರೆ. ಇದೀಗ ಬಿಗ್‌ಬಾಸ್ ಆಯೋಜಕರಿಗೂ ಇದರ ಕುರಿತು ಅರಿವಾಗಿದ್ದು, ಮುಂದಿನ ಸೀಸನ್‌ನಲ್ಲೂ ಸುದೀಪ್ ಇರುತ್ತಾರೆ ಎಂದು ಹೇಳುತ್ತಾ ಬಂದಿದ್ದರು.
ಇದೀಗ ಬಂದ ಸುದ್ದಿಯೆಂದರೆ ಬಿಗ್‌ಬಾಸ್ ಸೀಸನ್ -12 ಕ್ಕೆ ನಿರೂಪಕರಾಗಿ ಕಿಚ್ಚ ಸುದೀಪ್ ಮುಂದುವರಿಯುತ್ತಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಸುದೀಪ್ ಅವರು ಕೆಲವು ಕಂಡೀಷನ್ಸ್‌ಗಳನ್ನು ಹಾಕಿದ್ದಾರೆ. ಈ ಕಂಡೀಷನ್ಸ್‌ಗೆ ಆಯೋಜಕರು ಒಪ್ಪಿದರೆ ಖಂಡಿತ ಸುದೀಪ್ ಅವರೇ ಮುಂದಿನ ಸೀಸನ್‌ಗೆ ಹೋಸ್ಟ್ ಆಗುತ್ತಾರೆ ಎನ್ನಲಾಗುತ್ತಿದೆ.
ಸುದೀಪ್ ಹಾಕಿರುವ ಕಂಡಿಷನ್ಸ್ ಏನು?
ಮನೆ ಕಲರ್ ಫುಲ್ ಆಗಿರಬೇಕು, ಕನ್ನಡಕ್ಕೆ ಮೊದಲ ಆದ್ಯತೆ, ಕನ್ನಡ ಬಿಗ್‌ಬಾಸ್‌ನಲ್ಲಿ ಕನ್ನಡವೇ ವೇದಘೋಷ ಆಗಬೇಕು. ಒಳ್ಳೆಯ ಲೀಗಲ್ ಟೀಮ್ ಬೇಕು, ವಿವಾದಿತ ಸ್ಪರ್ಧಿಳು ಬೇಡ
ಈ ಎಲ್ಲಾ ಕಂಡಿಷನ್ಸ್ ಗೆ ಆಯೋಜಕರು ಓಕೆ ಮಾಡಿದರೆ ಕಿಚ್ಚ ಸುದೀಪ್ ಹೋಸ್ಟ್ ಆಗುತ್ತಾರೆ ಎನ್ನಲಾಗುತ್ತಿದೆ.
ಈ ಸುದ್ದಿ ಇದೀಗ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬಿಗ್‌ಬಾಸ್ -12 ಶುರುವಾಗುವ ಸಾಧ್ಯತೆಯಿದೆ.
