ಜನಪ್ರಿಯ ಮೆಸೇಜಿಂಗ್ ಫ್ಲಾಟ್ ಫಾರ್ಮ್ ಆಗಿರುವ ವಾಟ್ಸಪ್, ವಿನ್ಯಾಸ ಸಂಬಂಧಿತ ಬದಲಾವಣೆಗಳಿಂದ ಹಿಡಿದು ಗೌಪ್ಯತೆಯನ್ನು ಹೆಚ್ಚಿಸಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವವರೆಗೂ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಸೋಶಿಯಲ್ ಮೀಡಿಯಾಗಳ ಹೆಚ್ಚಿನ ಬಳಕೆಯಿಂದಾಗಿ ಬಳಕೆದಾರರು ಗೌಪ್ಯತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ವಾಟ್ಸಪ್ ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (End – To – End Encription) ನಂತಹ ಸೆಕ್ಯುರಿಟಿಗೆ ಸಂಬಂಧಿಸಿದ ಹಲವು ವೈಶಿಷ್ಟ್ಯವನ್ನು ಪರಿಚಯಿಸಿದೆ. ಇತ್ತೀಚೆಗೆ ವಾಟ್ಸಪ್ನಲ್ಲಿ ಬಹಳಷ್ಟು ಅಪ್ಡೇಟ್ಸ್ಗಳು (Updates) ಆಗುತ್ತಿದ್ದು ಇದು ಬಳಕೆದಾರರಿಗೆ ಬಹಳಷ್ಟು ಸರಳವಾಗುವಂತೆ ರೂಪಿಸುತ್ತಿದೆ.
ಹಲವಾರು ಫೀಚರ್ ಗಳನ್ನು ಪರಿಚಯಿಸಿರುವ ಮೆಟಾ ಮಾಲೀಕತ್ವದ ಕಂಪನಿ ಇದೀಗ ಡೆಸ್ಕ್‌ಟಾಪ್ ಬಳಕೆದಾರರಿಗೆ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಹೊಸದೊಂದು ಫೀಚರ್ ಅನ್ನು ತಂದಿದೆ. ಈ ಫೀಚರ್ ವೆಬ್ ಬಳಕೆದಾರರಿಗೆ ಗೌಪ್ಯತೆಯ ಬಗ್ಗೆ ಹೆಚ್ಚು ಭದ್ರತೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ನೀವು ಪ್ರತಿ ಬಾರಿ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಪ್ ಅನ್ನು ತೆರೆದಾಗ, ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಲು ನಿಮ್ಮನ್ನು ಇದು ಕೇಳುತ್ತದೆ.
ಡೆಸ್ಕಾಟಾಪ್ ಬಳಕೆದಾರರಿಗೆ ಪಾಸ್‌ವರ್ಡ್ ನೀಡುವ ಮೂಲಕ ಬಳಕೆದಾರರು ಮಾಡುವ ಚಾಟಿಂಗ್‌ಗೆ ಹೆಚ್ಚಿನ ಸುರಕ್ಷತೆ ನೀಡುತ್ತದೆ. ಒಟ್ಟಾರೆ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಈ ಹೊಸ ವೈಶಿಷ್ಟ್ಯವು ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಯಾವುದೇ ಅನಧಿಕೃತ ಪ್ರವೇಶದಿಂದ ರಕ್ಷಿಸಲು ಬಳಕೆದಾರರಿಗೆ ಪಾಸ್‌ವರ್ಡ್ ಹೊಂದಿಸಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿರಿಸುವ ಮೂಲಕ ಅಪ್ಲಿಕೇಶನ್ ಪಾಸ್‌ವರ್ಡ್ ರಕ್ಷಣೆಯನ್ನು ಯಾವಾಗ ಹೊಂದಿರಬೇಕು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ಸುಮಾರು ಮೂರು ವರ್ಷಗಳ ಹಿಂದೆ, Android ಮತ್ತು iOS ಗಾಗಿ ವಾಟ್ಸಪ್ ಬೀಟಾಗಾಗಿ ಸ್ಕ್ರೀನ್ ಲಾಕ್ ಅನ್ನು ಬಿಡುಗಡೆ ಮಾಡಿತು. ಆದರೆ ಇದನ್ನು ವೆಬ್ ಮತ್ತು ಡೆಸ್ಕ್‌ಟಾಪ್ ಕ್ಲೈಂಟ್‌ಗಳಲ್ಲಿ ಪರಿಚಯಿಸಲಾಗಿಲ್ಲ. ಈಗ, ಬಳಕೆದಾರರ ಆಗ್ರಹದ ಮೇರೆಗೆ ಇನ್‌ಸ್ಟಂಟ್ ಮೆಸೇಜ್ ಆ್ಯಪ್ ಡೆಸ್ಕ್‌ಟಾಪ್ ಬೀಟಾಗಾಗಿ ಭದ್ರತೆ, ಗೌಪ್ಯತೆ ದೃಷ್ಟಿಯಿಂದ ಸ್ಕ್ರೀನ್ ಲಾಕ್ ಆಯ್ಕೆಯನ್ನು ಪರಿಚಯಿಸಲು ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದೆ. ಡೆಸ್ಕ್‌ಟಾಪ್ ಬಳಕೆದಾರರಿಗೆ ಸ್ಕ್ರೀನ್ ಲಾಕ್ ಪಾಸ್‌ವರ್ಡ್ ಮರೆತುಹೋದರೆ, ವಾಟ್ಸಪ್ ಡೆಸ್ಕ್‌ಟಾಪ್‌ನಿಂದ ಲಾಗ್ ಔಟ್ ಮಾಡಬೇಕಾಗುತ್ತದೆ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಲಾಗ್ ಇನ್ ಮಾಡಬಹುದು.
Wabetainfo ವರದಿ ಮಾಡಿರುವ ಪ್ರಕಾರ, ವೈಶಿಷ್ಟ್ಯವು ಹೊಸದಾಗಿದ್ದೂ, ಬಳಕೆದಾರರು ತಮ್ಮ ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿರಿಸುವ ಮೂಲಕ ಅಪ್ಲಿಕೇಶನ್ ಪಾಸ್‌ವರ್ಡ್ ರಕ್ಷಣೆಯನ್ನು ಯಾವಾಗ ಹೊಂದಿರಬೇಕು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
