Home » NEET-UG Counseling: ನೀಟ್‌-ಯುಜಿ ಕೌನ್ಸೆಲಿಂಗ್‌ ಯಾವಾಗ ಆರಂಭ? ಇಲ್ಲಿದೆ ನೋಡಿ ಉತ್ತರ

NEET-UG Counseling: ನೀಟ್‌-ಯುಜಿ ಕೌನ್ಸೆಲಿಂಗ್‌ ಯಾವಾಗ ಆರಂಭ? ಇಲ್ಲಿದೆ ನೋಡಿ ಉತ್ತರ

0 comments
NEET Exam

NEET-UG Counseling: ದೇಶಾದ್ಯಂತ ಸಂಚಲನ ಸೃಷ್ಟಿಸಿದ ನೀಟ್ ವಿವಾದ ಇನ್ನೂ ಮುಗಿಯದ ಕಥೆಯಾಗಿದೆ. ಈ ನಡುವೆಯೇ ಕೇಂದ್ರವು ಪರೀಕ್ಷೆ ರದ್ದು ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಹೀಗಾಗಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ‘ನೀಟ್‌–ಯುಜಿ’ ಕೌನ್ಸೆಲಿಂಗ್‌(NEET-UG Counseling) ಪ್ರಕ್ರಿಯೆಯು ಯಾವಾಗ ಆರಂಭ ಆಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಇದರಬೆನ್ನಲ್ಲೇ ಈ ತಿಂಗಳ ಅಂತ್ಯದ ವೇಳೆಗೆ ಕೌನ್ಸೆಲಿಂಗ್‌ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

 

ಹೌದು, ಈ ತಿಂಗಳ ಅಂತ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ‘ನೀಟ್‌–ಯುಜಿ’ ಕೌನ್ಸೆಲಿಂಗ್‌ ಪ್ರಕ್ರಿಯೆಯು ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಸದ್ಯದಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯವು ಅಂತಿಮ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅಂದಹಾಗೆ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಜುಲೈ ಮೊದಲ ವಾರದಲ್ಲಿಯೇ ಚಾಲನೆ ದೊರೆಯವ ಸಾಧ್ಯತೆ ಇತ್ತು. ಆದರೆ, ಈ ಕುರಿತು ಅಧಿಕಾರಿಗಳು ಯಾವುದೇ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟಿಸದ ಕಾರಣ ಅದು ವಿಳಂಬವಾಗಿದೆ.

‘ಕೆಲ ವೈದ್ಯಕೀಯ ಕಾಲೇಜುಗಳಿಗೆ(Medical College) ಅನುಮತಿ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚುವರಿ ಸೀಟುಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಈ ಸೀಟುಗಳು ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿಯೇ ದೊರೆಯುವ ನಿರೀಕ್ಷೆಯಿದೆ. ಅದು ಖಚಿತವಾದ ಕೂಡಲೇ ಕೌನ್ಸೆಲಿಂಗ್‌ನ ದಿನಾಂಕ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

You may also like

Leave a Comment