Home » BBK-12: ಬಿಗ್‌ಬಾಸ್‌ ಕನ್ನಡ-12 ಆರಂಭ ಯಾವಾಗ? ಬಿಗ್‌ ಅಪ್ಡೇಟ್‌ ಕೊಟ್ಟ ಕಲರ್ಸ್

BBK-12: ಬಿಗ್‌ಬಾಸ್‌ ಕನ್ನಡ-12 ಆರಂಭ ಯಾವಾಗ? ಬಿಗ್‌ ಅಪ್ಡೇಟ್‌ ಕೊಟ್ಟ ಕಲರ್ಸ್

0 comments

BBK-12: ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್ ಸೀಸನ್ 12’ ಆರಂಭದ ಬಗ್ಗೆ ಇದೀಗ ಕಲರ್ಸ್ ವಾಹಿನಿ ಬಿಗ್ ಅಪ್ಡೇಟ್ ನೀಡಿದೆ.

ಹೌದು, ಕಲರ್ಸ್ ಕನ್ನಡ ವಾಹಿನಿಯ ಈ ಸೀಸನ್ನ ಮೊದಲ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಎಂಬ ಸಾಲುಗಳೊಟ್ಟಿಗೆ ಹೊಸ ಬಿಗ್ಬಾಸ್ನ ಟೈಟಲ್ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ಬಾಸ್ ಲೋಗೊನ ರಿವೀಲ್ ಮಾತ್ರವೇ ಇದೆ. ಪ್ರೋಮೊನಲ್ಲಿ ಸುದೀಪ್ ಕಾಣುತ್ತಿಲ್ಲ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಜೊತೆಗೆ ‘ಈ ಸಲ ಕಿಚ್ಚು ಮಾತ್ರ ಹೆಚ್ಚು’ ಎಂಬ ಧ್ಯೇಯ ವಾಕ್ಯವನ್ನೂ ಸೇರಿಸಲಾಗಿದೆ.

ಇನ್ನು ತಯಾರಕರು ಇನ್ನೂ ಅಧಿಕೃತ ಬಿಗ್ ಬಾಸ್ ಕನ್ನಡ ಸೀಸನ್‌ 12 ಪ್ರೀಮಿಯರ್ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಹೊಸ ಸೀಸನ್‌ಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯಕ್ರಮದ ಮುಖ ಮತ್ತು ಧ್ವನಿಯಾಗಿರುವ ನಟ ಕಿಚ್ಚ ಸುದೀಪ್ ಮತ್ತೊಮ್ಮೆ ನಿರೂಪಕರಾಗಿ ಮರಳಲಿದ್ದಾರೆ

ಅಲ್ಲದೆ ಸೆಪ್ಟೆಂಬರ್‌ ತಿಂಗಳಲ್ಲಿ ‘ಬಿಗ್ ಬಾಸ್-12′ ಶುರುವಾಗಬಹುದು ಎನ್ನಲಾಗುತ್ತಿದ್ದು, ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ʼಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

You may also like