Rain: ರಾಜ್ಯದ ಹಲವು ಕಡೆ ಮಳೆಯ ಸಿಂಚನ ಆದರೂ ಕೂಡ ಬೇಸಿಗೆ ದಗೆಯಿಂದ ಜನರು ತತ್ತರಿಸುತ್ತಿದ್ದಾರೆ. ಹೀಗಾಗಿ ಮುಂಗಾರು ಮಳೆ ಯಾವಾಗ ಎಂದು ಜನರು, ರೈತರು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ವರ್ಷದ ಮುಂಗಾರು ಮಳೆಯ ಆರಂಭದ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದೆ.
ಹೌದು, ಮುಂಗಾರು ಮಳೆ ಶೀಘ್ರವೇ ಆರಂಭವಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ನೈರುತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ. ಅಂದ್ರೆ ಮೇ 27ರಿಂದಾನೇ ಮುಂಗಾರು ಮಳೆ ಆರಂಭವಾಗಲಿದೆ. ಅಂದ್ರೆ 16 ವರ್ಷಗಳ ಬಳಿಕ ಮುಂಗಾರು ಮಳೆ ಇಷ್ಟು ಬೇಗ ಆರಂಭವಾಗ್ತಾ ಇರೋದು.
ಇನ್ನು ಕರ್ನಾಟಕಕ್ಕೆ ಈ ಬಾರಿ ಮೇ 30 ಅಥವಾ 31ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅಂದರೆ ರಾಜ್ಯಕ್ಕೆ ಸಾಮಾನ್ಯ ದಿನಗಳಿಗಿಂತ 5 ರಿಂದ 6 ದಿನ ಮುಂಚಿತವಾಗಿ ಆಗಮನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
