India- Pakistan: : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ. ಈ ಬೆನ್ನಲ್ಲೇ ಇಂಡಿಯಾ ಮತ್ತು ಪ್ಯಾಕ್ ಯುದ್ಧ ಆಗುವುದು ಪಕ್ಕ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಯುದ್ಧ ನಡೆದರೆ ಭಾರತದ ಪರ ನಿಲ್ಲುವ ದೇಶಗಳು ಯಾವುವು?
ಹೌದು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವಂತಹ ಕಾರ್ಮೋಡಗಳು ಕವಿದಿವೆ. ಈಗಾಗಲೇ ಅಮೆರಿಕ ಮತ್ತು ಇಸ್ರೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಇಳಿದಿವೆ. ಇದು ಇನ್ನೂ ಕುತೂಹಲವನ್ನು ಕೆರಳಿಸಿದೆ. ಇನ್ನು ಯಾವೆಲ್ಲ ದೇಶಗಳು ಭಾರತದೊಂದಿಗೆ ನಿಲ್ಲಬಹುದು ಎಂದು ನೋಡುವುದಾದರೆ ರಷ್ಯಾ ಜೊತೆಗೂ ಭಾರತಕ್ಕೆ ಈಗ ಉತ್ತಮ ಬಾಂಧವ್ಯವಿದೆ. ಜೊತೆಗೆ ಗಲ್ಫ್ ರಾಷ್ಟ್ರಗಳೊಂದಿಗೂ ಭಾರತ ಈಗ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಇದು ಪಾಕಿಸ್ತಾನಕ್ಕೆ ಹೊಡೆತ ನೀಡಲಿದೆ.
Mangaluru: ಮಂಗಳೂರು: ಡ್ರಗ್ಸ್ ಪೆಡ್ಲೆರ್ ಮಹೇಶ್ ಶೆಟ್ಟಿ ಯಾನೆ ಚುನ್ನಿ ಬಜಿಲಕೇರಿ ಬಂಧನ!
ಇನ್ನು, ಪಾಕಿಸ್ತಾನಕ್ಕೆ ನೆರೆಯ ದೈತ್ಯ ರಾಷ್ಟ್ರ ಚೀನಾ ಬೆಂಬಲ ನೀಡಬಹುದು. ಇದರ ಹೊರತಾಗಿ ಬ್ರಿಟನ್ ತಟಸ್ಥವಾಗಿರುವ ಸಾಧ್ಯತೆಯೇ ಹೆಚ್ಚು. ಕೇವಲ ಶಸ್ತ್ರಾಸ್ತ್ರ ವಿಚಾರದಲ್ಲಿ ಮಾತ್ರವಲ್ಲ, ವಿದೇಶಗಳ ಬೆಂಬಲ ವಿಚಾರದಲ್ಲೂ ಭಾರತ ಪಾಕಿಸ್ತಾನಕ್ಕಿಂತ ಒಂದು ಕೈ ಮೇಲಿದೆ.
ಯುದ್ಧ ಬೇಡ ಅಂದ ಸಿದ್ದುವನ್ನು ಹೊಗಳಿದ ಪಾಕ್ ಮೀಡಿಯಾ: ಯಡವಟ್ಟು ಸಿದ್ದಾ, ಏನಪ್ಪಾ ಇದೆಲ್ಲಾ?
