4
Raichur: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೊರವಿ ಗ್ರಾಮದಲ್ಲಿ ನಡೆದಿದೆ.
ಇದರಿಂದಾಗಿ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಕೊರವಿ ಗ್ರಾಮದ ಶಾಲೆ ಆವರಣ ಪ್ರವೇಶಿಸಿದ ದುಷ್ಕರ್ಮಿಗಳು ವಿದ್ಯುತ್ ಬೋರ್ಡ್ ಮುರಿದು ಕಿಟಕಿ ಮುಖಾಂತರ ಸಾಸಿವೆ, ಜೀರಿಗೆ ಎಸೆದು, ಅರಶಿನ-ಕುಂಕುಮ, ಲಿಂಬೆಹಣ್ಣು, ತೆಂಗಿನಕಾಯಿ ಇಟ್ಟು ಪೂಜೆ ಮಾಡಿ ಹೋಗಿದ್ದಾರೆ. ಮರುದಿನ ಶಾಲೆಗೆ ಬಂದ ಶಿಕ್ಷಕರು ಇದನ್ನು ನೋಡಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಮಾನ್ವಿ ಬಿಇಒ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
