Home » Prajwal Revanna Case: ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ಹರಿಬಿಟ್ಟಿದ್ದು ಯಾರು? SIT ತಂಡದಿಂದ ಸ್ಪೋಟಕ ಹೇಳಿಕೆ

Prajwal Revanna Case: ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ಹರಿಬಿಟ್ಟಿದ್ದು ಯಾರು? SIT ತಂಡದಿಂದ ಸ್ಪೋಟಕ ಹೇಳಿಕೆ

0 comments

Prajwal Revanna Case: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾ1ಚಾರ ಪ್ರಕರಣ ಸಾಭೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11.5ಲಕ್ಷ ರೂ ದಂಡವನ್ನು ವಿಧಿಸಿದೆ. ಇದರ ಬೆನ್ನಲ್ಲೇ ಈ ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ತಂಡವು ಸ್ಪೋಟಕ ವಿಚಾರ ಒಂದನ್ನು ಬಹಿರಂಗಪಡಿಸಿದೆ.

ಹೌದು, ರೇಪಿಸ್ಟ್ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಇಂದು (ಆ.2) ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​​​​ ಶಿಕ್ಷೆಯ ಪ್ರಮಾಣದ ಬಗ್ಗೆ ತೀರ್ಪು ಪ್ರಕಟಿಸಿದೆ. ಈ ಬೆನ್ನಲ್ಲೇ ಎಸ್ಐಟಿ ತಂಡವು ಸುದ್ದಿಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ವೇಳೆ ಯಾವುದೇ ಒತ್ತಡ ಬಂದಿಲ್ಲ. ಆದರೆ, ವಿಡಿಯೋ ಹರಿಬಿಟ್ಟವರ ಮೇಲೂ ಕೇಸ್ ಆಗುತ್ತದೆ. ವಿಡಿಯೋ ಹರಿಬಿಟ್ಟವರಿಗೂ ಶಿಕ್ಷೆಯಾಗಲಿದೆ. ಯಾಕೆಂದರೆ, ಈಗಾಗಲೇ ವಿಡಿಯೋ ಹರಿಬಿಟ್ಟ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪಿನ್ ಡ್ರೈವ್ ಸರಬರಾಜು ಮಾಡಲಾಗಿತ್ತು. ಈ ಹಿನ್ನಲೆ ರಾಜ್ಯ ಸರ್ಕಾರ ನಮ್ಮ‌ ನೇತೃತ್ವದಲ್ಲಿ ಎಸ್ ಐಟಿ ಮಾಡಲಾಗಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿ ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಪೆನ್ ಡ್ರೈವ್ ವಿತರಿಸಿದ್ರು ಅದರಲ್ಲಿ ಬಹಳ ಹೆಣ್ಣು ಮಕ್ಕಳು ಅಶ್ಲೀಲ ವಿಡಿಯೋ ಇತ್ತು. ಇದರಿಂದ ಸರ್ಕಾರ SIT ರಚನೆ ಮಾಡಿತ್ತು. ಆ ಸಮಯದಲ್ಲಿ ನಾಲ್ಕು ಸಂತ್ರಸ್ಥರು ದೂರು ನೀಡಿದ್ರು. ಆರು ಕೇಸ್ ಗಳು ಒಟ್ಟು ರಿಜಿಸ್ಟರ್ ಆಗಿದ್ವು . ಹೊಳೆನರಸೀಪುರದಲ್ಲಿ ಒಂದು ಕೇಸ್, ಮೂರು ಸಿಐಡಿಯಲ್ಲಿ ರಿಜಿಸ್ಟರ್ ಆಗಿತ್ತು. 5 ಕೇಸ್ ತನಿಖೆ ಪೂರ್ಣಗೊಂಡಿದೆ, ಚಾರ್ಜ್ ಶೀಟ್ ಆಗಿದೆ. ಕಳೆದ ಡಿಸೆಂಬರ್ 31 ಟ್ರಯಲ್‌ ಕೋರ್ಟ ಗೆ ಹಸ್ತಾಂತರ ಆಗಿತ್ತು. ಜ.3 ರಿಂದ ಒಂದು ಕೇಸ್ ನಿಂದ ಟ್ರಯಲ್ ಪ್ರಾರಂಭವಾಯ್ತು ಎಂದು ಮಾಹಿತಿ ನೀಡಿದ್ದಾರೆ.

You may also like