Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಜೈಲಿನಿಂದ ಹೊರಗೆ ಬಂದ ನಂತರ ತಮ್ಮ ಕೆಲಸದಲ್ಲಿ ತೊಡಗಿ ಕೊಂಡಿದ್ದು, ಇನ್ಸ್‌ಟಾಗ್ರಾಂನಲ್ಲಿ ತಮ್ಮ ಕೆಲಸದ ಕುರಿತು ಮಾಹಿತಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಜೈಲಿನಿಂದ ಹೊರ ಬಂದ ನಂತರ ಪವಿತ್ರಾ ಗೌಡ ಅವರು ಟೆಂಪಲ್ ರನ್ ಮಾಡಿದ್ದಾರೆ. ಇದೀಗ ಪವಿತ್ರಾ ಗೌಡ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದು, ಅದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿ ದೇಗುಲದ ವರಾಂಡದಲ್ಲಿ ಕುಳಿತುಕೊಂಡು ವಿವಿಧ ರೀತಿಯಲ್ಲಿ ಫೋಸ್ ನೀಡಿದ್ದಾರೆ. ಜೊತೆಗೆ, ʼಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ…ಮುನ್ನ ಮಾಡಿದ ಪಾಪ ಯಾರ ತಾತನ ಗಂಟುʼ ಎನ್ನುವ ಹಾಡನ್ನು ಹಾಕಿದ್ದಾರೆ.
ಓಂ ಶ್ರೀ ರಾಘವೇಂದ್ರಾಯ ನಮಃ ಎನ್ನುವ ಮಾತ್ರವನ್ನು ಕ್ಯಾಪ್ಶನ್ ಹಾಕಿದ್ದಾರೆ. ಹಸಿರು ಸೀರೆಯನ್ನುಟ್ಟು, ಬೇಸರದಲ್ಲಿರುವಂತೆ ತಮ್ಮನ್ನು ತಾವು ತೋರಿಸಿಕೊಂಡಿದ್ದಾರೆ ಪವಿತ್ರ ಎನ್ನಬಹುದು.
