Home » Bhavana Ramanna: ನಟಿ ಭಾವನಾ IVF ಗೆ ದಕ್ಷಿಣ ಭಾರತದ ವ್ಯಕ್ತಿಯ ವೀರ್ಯವೇ ಬೇಕೆಂದಿದ್ದು ಯಾಕೆ?

Bhavana Ramanna: ನಟಿ ಭಾವನಾ IVF ಗೆ ದಕ್ಷಿಣ ಭಾರತದ ವ್ಯಕ್ತಿಯ ವೀರ್ಯವೇ ಬೇಕೆಂದಿದ್ದು ಯಾಕೆ?

by V R
0 comments

Bhavana Ramanna: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಭಾವನ ರಾಮಣ್ಣ ಸದ್ಯ IVF ಮೂಲಕ ಗರ್ಭವತಿಯಾಗಿದ್ದಾರೆ. ಇದು ಸದ್ಯ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಚಾರ.

ಇತ್ತೀಚಿಗೆ ಸಂದರ್ಶನದಲ್ಲಿ ಭಾವನಾ ಅವರು ತನ್ನ IVF ಗರ್ಭಧಾರಣೆಗೆ ದಕ್ಷಿಣ ಭಾರತದ ಪುರುಷರೊಬ್ಬರ ವೀರ್ಯವನ್ನು ದಾನ ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಹಾಗಾದರೆ ಅವರು ದಕ್ಷಿಣ ಭಾರತದ ಪುರುಷರ ವೀರ್ಯವನ್ನೇ ಯಾಕೆ ಪಡೆದರು?

ಹೌದು, ಇತ್ತೀಚಿಗೆ ಸಂದರ್ಶನದಲ್ಲಿ ಭಾವನಾ ಅವರು ವೀರ್ಯ ದಾನ ಪಡೆತುವ ವೇಳೆ ತಾವು ವೈದ್ಯರ ಬಳಿ ಏನೆಲ್ಲ ಚರ್ಚಿಸಿದ್ದೆ ಎಂಬುದರ ಕುರಿತು ಮಾತನಾಡಿದ್ದಾರೆ. ತಮಗೆ ದಕ್ಷಿಣ ಭಾರತ ಮೂಲದ ದಾನಿಯ ವೀರ್ಯಾಣು ಪಡೆಯಲು ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದರಂತೆ. ಯಾಕೆಂದರೆ ಆಹಾರ ಪದ್ದತಿ, ಜೀನ್ಸ್ ಮತ್ತು ಜೀವನ ಪದ್ಧತಿಗೆ ಸರಿ ಹೊಂದುವ ಸಲುವಾಗಿ ನನಗೆ ದಕ್ಷಿಣ ಭಾರತದ ವ್ಯಕ್ತಿಯ ವೀರ್ಯಾಣು ಸಿಕ್ಕರೆ ಉತ್ತಮವಾಗಿರಲಿದೆ ಎಂದು ಹೇಳಿಕಿಂಡಿದ್ದೆ ಎಂಬ ಸಂಗಂತಿಯನ್ನು ಹಂಚಿಕೊಂಡಿದ್ದಾರೆ.

You may also like