Home » Trump tariff: ಡೊನಾಲ್ಡ್ ಟ್ರಂಪ್‌ ಭಾರತದ ಮೇಲೆ 50% ಸುಂಕ ವಿಧಿಸಿದ್ದು ಏಕೆ? – ಅಮೆರಿಕದ ಕಂಪನಿಯಿಂದ ಬಹಿರಂಗ

Trump tariff: ಡೊನಾಲ್ಡ್ ಟ್ರಂಪ್‌ ಭಾರತದ ಮೇಲೆ 50% ಸುಂಕ ವಿಧಿಸಿದ್ದು ಏಕೆ? – ಅಮೆರಿಕದ ಕಂಪನಿಯಿಂದ ಬಹಿರಂಗ

0 comments

Trump tariff: ಅಮೆರಿಕದ ಪ್ರೋಕರೇಜ್ ಸಂಸ್ಥೆ ಜೆಫರೀಸ್ ವರದಿಯ ಪ್ರಕಾರ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50ರಷ್ಟು ಸುಂಕವು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ‘ವೈಯಕ್ತಿಕ ಕೋಪ’ದ ಪರಿಣಾಮವಾಗಿದೆ. ವರದಿಯ ಪ್ರಕಾರ, ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ನಡೆಯುತ್ತಿರುವ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಬಯಸಿದ್ದರು, ಆದರೆ ಭಾರತ ಅದನ್ನು ನಿರಾಕರಿಸಿದ್ದು ಪ್ರಸ್ತುತ ಭಾರಿ ಸುಂಕಕ್ಕೆ ಎಡೆಮಾಡಿಕೊಟ್ಟಿದೆ.

ಅಮೆರಿಕವು ಮೊದಲು ಭಾರತದ ಮೇಲೆ 25 % ಮತ್ತು ನಂತರ ಹೆಚ್ಚುವರಿಯಾಗಿ 25 % ಸುಂಕವನ್ನು ವಿಧಿಸಿತು, ಇದು ಆಗಸ್ಟ್ 27 ರಿಂದ ಜಾರಿಗೆ ಬಂದಿದೆ. ಈ ಸುಂಕದಿಂದಾಗಿ, ಭಾರತದಿಂದ ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವುದು ದುಬಾರಿಯಾಗಿದೆ.

ಜೆಫರೀಸ್ ವರದಿಯ ಪ್ರಕಾರ, ಭಾರತವು ತನ್ನ ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗಿನ ಸಂಬಂಧಗಳ ಬಗ್ಗೆ ನಿರಂತರವಾಗಿ ಪಾಕಿಸ್ತಾನದೊಂದಿಗಿನ ಸಂಘರ್ಷಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಗಳಲ್ಲಿ ಎರಡರ ನಡುವೆ ಮಧ್ಯಸ್ಥಿಕೆ ವಹಿಸಲು ಮತ್ತು ಕದನ ವಿರಾಮವನ್ನು ತರಲು ನಾನೇ ಕಾರಣ ಎಂಬುದನ್ನು ಮತ್ತೆ ಮತ್ತೆ ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡುತ್ತಿದ್ದಾರೆ.

ಎಎನ್‌ಐ ಸುದ್ದಿಯ ಪ್ರಕಾರ, ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಮಿಲಿಟರಿ ಸಂಘರ್ಷ ನಡೆದಿತ್ತು ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ನಂತರ, ಟ್ರಂಪ್ ಇಬ್ಬರ ನಡುವೆ ಮಧ್ಯಪ್ರವೇಶಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದರು. ಆದರೆ ಭಾರತ ಅವರಿಗೆ ಹಾಗೆ ಮಾಡಲು ಅವಕಾಶ ನೀಡಲಿಲ್ಲ. ಅದರ ನಂತರ ಟ್ರಂಪ್ ಭಾರತದ ಮೇಲೆ ಕೋಪಗೊಂಡಿದ್ದಾರೆ ಮತ್ತು ಅದರ ಮೇಲೆ ಸುಂಕಗಳನ್ನು ವಿಧಿಸಿದ್ದಾರೆ.

You may also like