Rishabh Shetty: ಇಡೀ ಕನ್ನಡ ನಾಡಿನ ಜನತೆಯನ್ನು ಕಾಮಿಡಿ ಮೂಲಕ ನಕ್ಕು ನಲಸಿದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನೆನ್ನೆ ತಾನೇ ಹೃದಯಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿ ಕುಟುಂಬ ಹಾಗೂ ನಾಡಿನ ಹಿರಿಯ ಕಲಾವಿದರು ಸಂತಾಪಸೂಚಿಸಿದ್ದರು. ಆದರೆ ಕಾಂತಾರ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಹತ್ತಿರದಲ್ಲೇ ಇದ್ದರೂ ಕೂಡ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂಬ ಅಪವಾದ ಕೇಳಿಬಂದಿತ್ತು. ಇದೀಗ ರಿಷಬ್ ಶೆಟ್ಟಿ ಏಕೆ ಬರಲಿಲ್ಲ ಎಂಬುದಕ್ಕೆ ಉತ್ತರ ದೊರೆತಿದೆ.
ಈ ಬಗ್ಗೆ ರಾಕೇಶ್ ಆಪ್ತ ಸೂರಜ್ ಮಾತನಾಡಿದ್ದು ‘ಅವರ ಪಾಯಿಂಟ್ ಆಫ್ ವೀವ್ ಏನಿದೆ ಗೊತ್ತಿಲ್ಲ. ಶೂಟಿಂಗ್ ದಿನಾಂಕ ಮೊದ್ಲೇ ಗೊತ್ತಾಗಿರುತ್ತದೆ. ಹೀಗಾಗಿ ಹೊರಗಿನಿಂದ ಕಲಾವಿದರನ್ನು ಕರೆಸಿದಾಗ ಆ ದಿನದ ಶೂಟ್ ಮಾಡಲೇಬೇಕಿರುತ್ತದೆ. ಈ ಕಾರಣದಿಂದ ಹರಿಷಪ್ಶೆಟ್ಟಿ ಅವರು ಬರಲು ಆಗದಿರಬಹುದು. ಅವರು ಬಂದೇ ಬರುತ್ತಾರೆ ಎನ್ನುವ ಧೈರ್ಯ ನಮಗೆ ಇದೆ’ ಎಂದಿದ್ದಾರೆ ಅವರು.
