Home » CM Siddaramiah : ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಪೊಲೀಸರೇ ಏಕೆ ಹೊಣೆ? ಸಿಎಂ ಸಿದ್ದರಾಮಯ್ಯ ಹೇಳಿದ್ದಷ್ಟು

CM Siddaramiah : ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಪೊಲೀಸರೇ ಏಕೆ ಹೊಣೆ? ಸಿಎಂ ಸಿದ್ದರಾಮಯ್ಯ ಹೇಳಿದ್ದಷ್ಟು

0 comments

CM Siddaramiah: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸ್ತೋಮ ಸೇರಿದಾಗ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಇದಕ್ಕೆ ಪೊಲೀಸರನ್ನು ಹೊಣೆ ಮಾಡಿ ಅನೇಕ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದೀಗ ಸಿಎಂ ಸಿದ್ದರಾಮಯ್ಯನವರ ಬಳಿ ಮಾಧ್ಯಮದವರು ಈ ಕುರಿತಾಗಿ ಪ್ರಶ್ನೆ ಮಾಡಿದ್ದಕ್ಕೆ ಸಿದ್ದರಾಮಯ್ಯ ಅಚ್ಚರಿಯ ಉತ್ತರವನ್ನು ನೀಡಿದ್ದಾರೆ.

ಹೌದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆ ಮತ್ತು 11 ಜನರ ಸಾವಿಗೆ ಸರ್ಕಾರವು ನಗರ ಪೊಲೀಸ್ ಕಮೀಷನರ್ ಬಿ ದಯಾನಂದ್ ಮತ್ತು ಇತರ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಈ ಕುರಿತಾಗಿ ರಾಜ್ಯಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಹೊಣೆಹೊತ್ತು ರಾಜೀನಾಮೆ ಸಲ್ಲಿಸುವ ಬದಲು ಮಾಡಿ ಬಲಿಪಶು ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಅಲ್ಲದೆ ಈ ಪ್ರಕರಣಕ್ಕೆ ಪೊಲೀಸರನ್ನೇ ಏಕೆ ಹೊಣೆ ಮಾಡಲಾಗಿದೆ ಎಂಬ ಚರ್ಚೆ ಕೂಡ ಇದೆ. ಈ ಕುರಿತಾಗಿ ಮಾಧ್ಯಮದವರು ಸಿದ್ದರಾಮಯ್ಯರಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದರ ಬಗ್ಗೆ ಇಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ‘ಬಿಜೆಪಿಯವರು ರಾಜಕೀಯಕ್ಕೋಸ್ಕರ ಮಾತನಾಡುತ್ತಾರೆ. ನಾನು ರಾಜಕೀಯ ಮಾಡಕ್ಕೆ ಹೋಗಲ್ಲ ಈಗ. ಮೇಲ್ನೋಟಕ್ಕೆ ಯಾರು ಜವಾಬ್ಧಾರರಿದ್ದಾರೆ, ಯಾರು ಜವಾಬ್ಧಾರಿಯನ್ನು ನಿಭಾಯಿಸಿಲ್ಲ ಅವರ ಮೇಲೆ ಕ್ರಮ ಕೈಗೊಂಡಿದ್ದೇವೆ’ ಎಂದು ಸಿಎಂ ಸಿದ್ದರಾಮಯ್ಯ ಹೆಚ್ಚು ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.

You may also like