Home » Actor Darshan: “ನಟ ದರ್ಶನ್ ಭೇಟಿ ಮಾಡಲು ನಾನು ಯಾಕೆ ಹೋಗಬೇಕು”: ಖ್ಯಾತ ನಟರೊಬ್ಬರು ಹೀಗೆ ಹೇಳಲು ಕಾರಣವೇನು?

Actor Darshan: “ನಟ ದರ್ಶನ್ ಭೇಟಿ ಮಾಡಲು ನಾನು ಯಾಕೆ ಹೋಗಬೇಕು”: ಖ್ಯಾತ ನಟರೊಬ್ಬರು ಹೀಗೆ ಹೇಳಲು ಕಾರಣವೇನು?

5 comments

Actor Darshan: ನಟ ದರ್ಶನ್ (Actor Darshan) ಇದೀಗ ರೇಣುಕಾ ಸ್ವಾಮಿ (RenukaSwamy) ಯನ್ನು ಕೊಲೆ ಮಾಡಿರುವ ಆರೋಪದ ಮೇಲೆ ಸದ್ಯ ಜೈಲಿನಲ್ಲಿದ್ದಾರೆ. ಆದ್ರೆ ದರ್ಶನ್ ಅವರ ಈ ಜೈಲು ವಾಸದಿಂದ ಕೆಲವು ಅಭಿಮಾನಿಗಳು ತುಂಬಾ ಹತಾಶೆ ಆಗಿದ್ದಾರೆ. ಅವರ ಬಿಡುಗಡೆಗಾಗಿ ಹಾತೋರೆಯುತ್ತಿದ್ದಾರೆ. ಅಂತೆಯೇ

ದರ್ಶನ್ ಅವರ ಅಭಿಮಾನಿಗಳು, ಕುಟುಂಬಸ್ಥರು ಸೇರಿ ಕೆಲ ಆಪ್ತರು ಈಗಾಗಲೇ ಅಲ್ಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಮಾತನಾಡಿ ಬರುತ್ತಿದ್ದಾರೆ. ಮತ್ತೊಂದು ಕಡೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ.

ಈಗಾಗಲೇ ವಿನೋದ್ ಪ್ರಭಾಕರ್, ಪ್ರೇಮ್, ರಕ್ಷಿತಾ ದಂಪತಿ, ವಿನೋದ್ ರಾಜ್, ಸಾಧು ಕೋಕಿಲ, ಧನ್ವೀರ್ ಸೇರಿದಂತೆ ಹಲವರು ದರ್ಶನ್ ಭೇಟಿಗೆ ಹೋಗಿದ್ದರು. ಮತ್ತೆ ಕೆಲವರು ಜೈಲಿನ ಬಳಿಗೆ ಹೋದರೂ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇನ್ನು ಕೆಲವರು ಅಲ್ಲಿಗೆ ಹೋಗಿ ದರ್ಶನ್‌ನ ಮಾತನಾಡಿಸಿಕೊಂಡು ಬರಲು ಉತ್ಸುಕರಾಗಿದ್ದಾರೆ.

ಆದ್ರೆ ನಟ, ನಿರ್ದೇಶಕ ರಾಜ್‌. ಬಿ ಶೆಟ್ಟಿ ಮಾತ್ರ ನನಗೆ ದರ್ಶನ್ ಅವರು ಹೆಚ್ಚು ಪರಿಚಯ ಇಲ್ಲ. ಹಾಗಾಗಿ ನಾನು ಜೈಲಿಗೆ ಹೋಗಿ ಭೇಟಿ ಮಾಡುವ ಆಲೋಚನೆ ಇಲ್ಲ ಎಂದಿದ್ದಾರೆ. ನಾನು ಯಾಕೆ ಭೇಟಿ ಮಾಡಬೇಕು ಎಂದು ಸಂಚಾರ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಾಜ್‌ ಬಿ. ಶೆಟ್ಟಿ ನೀಡಿರುವ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಹೌದು, ನೀವು ದರ್ಶನ್ ಭೇಟಿಗೆ ಹೋಗುತ್ತೀರಾ? ಎನ್ನುವ ಪ್ರಶ್ನೆಗೆ “ನನಗೆ ದರ್ಶನ್ ಅವರು ಹೆಚ್ಚು ಪರಿಚಯ ಇಲ್ಲ. ನಾನು ಒಮ್ಮೆ ಮಾತ್ರ ವೇದಿಕೆಯೊಂದರಲ್ಲಿ ಅವರನ್ನು ಭೇಟಿ ಆಗಿದ್ದೆ. ಒಂದ್ಸಲ ಭೇಟಿ ಆದವರು ಜೈಲಿನಲ್ಲಿ ಇದ್ದಾಗ ಭೇಟಿಗೆ ಹೋಗಲ್ಲ ಅಲ್ವಾ? ಸೋ ನನಗೆ ಗೊತ್ತಿಲ್ಲ ಯಾಕೆ ಹೋಗಬೇಕು ಅಂತ”

“ಆ ಘಟನೆ ಆಗಬಾರದಿದ್ದು ಆಗೋಗಿದೆ. ಅದರ ಬಗ್ಗೆನೇ ಮಾತಾಡಿ ಪ್ರಯೋಜನ ಇಲ್ಲ.ಯಾರೇ ಆಗಲಿ ಯಾವುದೇ ರೀತಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಸಹ ಸಾಮಾನ್ಯರು. ನಾವು ಸಹ ಶಿಕ್ಷೆ ಅನುಭವಿಸಬೇಕು. ಪೊಲೀಸರು ಪ್ರಕರಣವನ್ನು ತನಿಖೆ ನಡೆಸಿದ ರೀತಿ ಖುಷಿ ಅನ್ನಿಸ್ತು. ಕೆಲವೊಮ್ಮೆ ಪ್ರಭಾವಿಗಳಿಗೆ ಶಿಕ್ಷೆ ಆಗಲ್ಲ ಎಂದು ಜನರಲ್ಲಿ ಕೆಲವೊಮ್ಮೆ ಕೆಟ್ಟ ಅಭಿಪ್ರಾಯ ಇರಬಹುದು. ಅದು ಈಗ ಸುಳ್ಳಾಗಿದೆ. ಮುಂದೆ ಏನಾಗತ್ತೆ ನೋಡೋಣ” ಎಂದಿದ್ದಾರೆ.

You may also like

Leave a Comment