Home » C T Ravi: ನಟಿ ರಮ್ಯಾ ಕೇಸಲ್ಲಿ ಆದಂತೆ ವೀರೇಂದ್ರ ಹೆಗ್ಗಡೆ ಕೇಸ್ ಅಲ್ಲಿ ಯಾಕೆ ಅರೆಸ್ಟ್ ಮಾಡಿಲ್ಲ – ಸಿಟಿ ರವಿ ಪ್ರಶ್ನೆ!!

C T Ravi: ನಟಿ ರಮ್ಯಾ ಕೇಸಲ್ಲಿ ಆದಂತೆ ವೀರೇಂದ್ರ ಹೆಗ್ಗಡೆ ಕೇಸ್ ಅಲ್ಲಿ ಯಾಕೆ ಅರೆಸ್ಟ್ ಮಾಡಿಲ್ಲ – ಸಿಟಿ ರವಿ ಪ್ರಶ್ನೆ!!

0 comments

C T Ravi: ಚಿತ್ರನಟಿ ರಮ್ಯಾ ಅವರಿಗೆ ಕೆಲವು ಕಿಡಿಗೇಡಿಗಳು ಅಶ್ಲೀಲ ಕಮೆಂಟ್ ಮಾಡಿದರು ಎಂಬ ಕಾರಣಕ್ಕಾಗಿ ಅವರನ್ನು ಸರ್ಕಾರ ತಕ್ಷಣವೇ ಬಂಧಿಸಿತ್ತು. ಆದರೆ ಇದೀಗ ವೀರೇಂದ್ರ ಹೆಗ್ಗಡೆಯವರ ಕೇಸ್ ನಲ್ಲಿ ಯಾಕೆ ಈ ರೀತಿ ನಡೆಯುತ್ತಿಲ್ಲ ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿಟಿ ರವಿ ಅವರು “ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಆರೋಪ ಮಾಡಿದವರ ಪೈಕಿ ಎಷ್ಟು ಜನರನ್ನು ಬಂಧಿಸಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ

ಅಲ್ಲದೆ ನೀವು‌ ಮಾಡಿದ ರಾಜಕಾರಣದ ವಿರುದ್ಧ ನಾವು ತಿರುಗಿಬಿದ್ದಿದ್ದೇವೆ. ಈ ಪ್ರಕರಣದಲ್ಲಿ ಚೆನ್ನೈ, ವಿದೇಶಗಳಿಂದಲೂ ಹಣ ಬಂದಿದೆ. ನೀವು ಪಕ್ಷ ರಾಜಕಾರಣ ಮಾಡಬಾರದು ಎಂದೇ ಎನ್‌ಐಎ ತನಿಖೆಗೆ ವಹಿಸಿ ಎಂಬ ಒತ್ತಾಯಿಸುತ್ತಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

You may also like