Home » ಪತ್ನಿಯನ್ನು ಮೊಬೈಲ್ ಚಾರ್ಜರ್‌ನಿಂದ ಉಸಿರುಗಟ್ಟಿಸಿ ಕೊಲೆ: ಪತಿ ಆತ್ಮಹತ್ಯೆ,ತಬ್ಬಳಿಗಳಾದ ಮಕ್ಕಳು

ಪತ್ನಿಯನ್ನು ಮೊಬೈಲ್ ಚಾರ್ಜರ್‌ನಿಂದ ಉಸಿರುಗಟ್ಟಿಸಿ ಕೊಲೆ: ಪತಿ ಆತ್ಮಹತ್ಯೆ,ತಬ್ಬಳಿಗಳಾದ ಮಕ್ಕಳು

by Praveen Chennavara
0 comments

ಇಂದೋರ್ : ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನ ಮೊಬೈಲ್ ಚಾರ್ಜರ್ ನಿಂದ ಉಸಿರುಗಟ್ಟಿಸಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಧ್ಯಪ್ರದೇಶದ ಇಂದೋರ್‌ನಲ್ಲಿ ಘಟನೆ ನಡೆದಿದ್ದು, ಇಬ್ಬರು ಮಕ್ಕಳೀಗೆ ತಬ್ಬಲಿಯಾಗಿದ್ದಾರೆ. ಮೃತರನ್ನು ಪತಿ ರಂಜಿತ್ ಹಾಗೂ ಪತ್ನಿ ಸಂತೋಷಿ ಬಾಯಿ ಎಂದು ಗುರುತಿಸಲಾಗಿದೆ.

ಗುತ್ತಿಗೆದಾರನಾಗಿರುವ ಪತಿ ರಂಜಿತ್ ಯಾವಾಗಲೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆಕೆಗೆ ಅಕ್ರಮ ಸಂಬಂಧವಿದೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದ.

ಈ ನಡುವೆ ಮಕ್ಕಳು ಹೋಳಿ ಆಡಲು ತೆರಳಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ.ಜಗಳ ತಾರಕಕ್ಕೇರಿ ಅಲ್ಲೇ ಇದ್ದ ಮೊಬೈಲ್ ಚಾರ್ಜರ್ ನಿಂದ ಗಂಟಲು ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.ಬಳಿಕ ಡೆತ್‌ನೋಟ್ ಬರೆದಿಟ್ಟು ಆತನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment