Home » Bombay High court : ಗಂಡನನ್ನು ಹೆಂಡತಿ ‘ನಪುಂಸಕ’ ಎಂದು ಕರೆಯಬಹುದು – ಹೈಕೋರ್ಟ್ ತೀರ್ಪು

Bombay High court : ಗಂಡನನ್ನು ಹೆಂಡತಿ ‘ನಪುಂಸಕ’ ಎಂದು ಕರೆಯಬಹುದು – ಹೈಕೋರ್ಟ್ ತೀರ್ಪು

0 comments

Bombay High court : ಗಂಡನನ್ನು ನಪುಂಸಕ ಎಂದು ಕರೆಯುವ ಹಕ್ಕು ಹೆಂಡತಿಗೆ ಇದೆ ಎಂದು ಬಾಂಬೆ ಹೈಕೋರ್ಟ್ ಇತ್ತೀಚಿಗೆ ಮಹತ್ವದ ತೀರ್ಪನ್ನು ನೀಡಿದೆ.

ಹೌದು, ಮದುವೆಗೆ ಸಂಬಂಧಿಸಿದಂತೆ ಪತಿ ಮತ್ತು ಪತ್ನಿಯ ನಡುವೆ ವಿವಾದ ಉಂಟಾಗಿ, ಆ ಸಮಯದಲ್ಲಿ ಪತ್ನಿ ತನ್ನ ಆರೋಪವನ್ನು ಸಾಬೀತುಪಡಿಸಲು ಪತಿಯನ್ನು ನಪುಂಸಕ ಎಂದು ಕರೆದರೆ, ಅದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ, ಪತ್ನಿ ಮಾನಸಿಕ ಕಿರುಕುಳ ಅಥವಾ ನಿರ್ಲಕ್ಷ್ಯವನ್ನು ಸಾಬೀತುಪಡಿಸಲು ಬಯಸಿದಾಗ, ದುರ್ಬಲತೆಯಂತಹ ಆರೋಪಗಳನ್ನು ಪ್ರಸ್ತುತ ಮತ್ತು ಅಗತ್ಯವೆಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಎಸ್.ಎಂ. ಮೋಡಕ್ ಈ ಮಹತ್ವದ ತೀರ್ಪನ್ನು ನೀಡಿದ್ದು ಗಂಡ ಮತ್ತು ಹೆಂಡತಿಯ ನಡುವಿನ ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣವಿದ್ದಾಗ, ಪತ್ನಿಗೆ ತನ್ನ ಪರವಾಗಿ ಅಂತಹ ಆರೋಪಗಳನ್ನು ಮಾಡುವ ಹಕ್ಕಿದೆ” ಹೇಳಿದ್ದಾರೆ.

ಇದನ್ನೂ ಓದಿ: Tamilunadu: ‘ಚಿಕನ್ ಚಿಲ್ಲಿ’ ಎಂದು ಬಾವಲಿ ಮಾಂಸದ ಖಾದ್ಯ ಮಾರಾಟ !! ಇಬ್ಬರು ಅರೆಸ್ಟ್

You may also like