Home » Tragedy: ಪತ್ನಿ ಕಿರುಕುಳ; ಐಟಿ ಮ್ಯಾನೇಜರ್‌ ಆತ್ಮಹತ್ಯೆ

Tragedy: ಪತ್ನಿ ಕಿರುಕುಳ; ಐಟಿ ಮ್ಯಾನೇಜರ್‌ ಆತ್ಮಹತ್ಯೆ

0 comments

Agra: ಬೆಂಗಳೂರಿನ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಮರೆಮಾಚುವ ಮುನ್ನವೇ ಉತ್ತರ ಪ್ರದೇಶದ ಆಗ್ರಾದಲ್ಲಿ ಪತ್ನಿಯ ಕಿರುಕುಳ ತಾಳಲಾರದೆ ಐಟಿ ಮ್ಯಾನೇಜರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಈ ಘಟನೆ ಫೆ.24 ರಂದು ನಡೆದಿದ್ದು, ಮಾನವ್‌ ಶರ್ಮಾ ಎಂಬಾತ ಸಾವಿಗೀಡಾಗಿದ್ದಾನೆ.

ಸಾಯೋ ಮುನ್ನ ಈತ ಏಳು ನಿಮಿಷಗಳ ವೀಡಿಯೋ ಮಾಡಿದ್ದು, ಇದರಲ್ಲಿ ತನ್ನ ಪತ್ನಿಯಿಂದ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ವಿವರಿಸಿ ಹೇಳಿದ್ದಾನೆ. ಪೋಷಕರು ಮಗನ ಸಾವಿನಿಂದ ಆಘಾತಕ್ಕೊಳಗಾಗಿದ್ದು, ದೂರು ದಾಖಲಿಸಿದ್ದಾರೆ.

ಆಗ್ರಾದ ಡಿಫೆನ್ಸ್‌ ಕಾಲೋನಿಯ ನಿವಾಸಿಯಾಗಿರುವ ಮಾನವ್‌ ಶರ್ಮಾ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಈತನ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಪಡೆದಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದ ವ್ಯಕ್ತಿ, ಗಂಡ ಹೆಂಡತಿ ಇಬ್ಬರೂ ಮುಂಬೈನಲ್ಲಿ ವಾಸವಾಗಿದ್ದು, ಚೆನ್ನಾಗಿಯೇ ಇದ್ದರು. ಆದರೆ ಕೆಲವೇ ತಿಂಗಳಲ್ಲಿ ಸೊಸೆ ಮಗನ ಜೊತೆ ಜಗಳವಾಡಲು ಪ್ರಾರಂಭ ಮಾಡಿದ್ದಾಳೆ. ಕುಟುಂಬದವರ ಮೇಲೆ ಅನಾವಶ್ಯಕ ಆರೋಪ ಹೊರೆಸಿ ಪೊಲೀಸ್‌ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಳು.

ನಂತರ ಮಗ ಸೊಸೆಯನ್ನು ತಾಯಿ ಮನೆಯಲ್ಲಿ ಬಿಟ್ಟು ಆಗ್ರಾಕ್ಕೆ ಬಂದಿದ್ದ. ಈ ಸಂದರ್ಭ ಅತ್ತೆ ಮಾವ ಮಾನವ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಫೆ.24 ರಂದು ಮುಂಜಾನೆ 5 ಗಂಟೆಗೆ ಮಾನವ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ನಾವು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಅಷ್ಟರಲ್ಲಾಗಲೇ ಆತನ ಸಾವಿಗೀಡಾಗಿದ್ದ ಎಂದು ತಂದೆ ಹೇಳಿದ್ದಾರೆ.

You may also like