Home » Domestic Violence: ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧದ ಅನುಮಾನ: ಕೋಪದಲ್ಲಿ ಗಂಡನ ಮೇಲೆ ಕುದಿಯುತ್ತಿರುವ ಎಣ್ಣೆ ಸುರಿದ ಪತ್ನಿ

Domestic Violence: ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧದ ಅನುಮಾನ: ಕೋಪದಲ್ಲಿ ಗಂಡನ ಮೇಲೆ ಕುದಿಯುತ್ತಿರುವ ಎಣ್ಣೆ ಸುರಿದ ಪತ್ನಿ

by Mallika
0 comments

Domestic Violence: ಹೆಂಡತಿಯೊಬ್ಬಳು ಕೋಪದಲ್ಲಿ ಗಂಡನ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಗಂಡನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೃಷ್ಣಪುರಂನ ಆಟೋ ಚಾಲಕ ಬಾಲಸುಬ್ರಮಣಿಯನ್‌ (42) ಹಲ್ಲೆಗೊಳಗಾದ ಗಂಡ. ಮುತ್ತುಲಕ್ಷ್ಮೀ (34) ಈತನ ಪತ್ನಿ. ಇವರಿಗೆ 3 ಹೆಣ್ಣು ಮತ್ತು ಒಬ್ಬ ಗಂಡು ಮಗ ಇದ್ದಾರೆ. ಗಂಡ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನದಿಂದ ಮುತ್ತುಲಕ್ಷ್ಮೀ ಆತನ ಜೊತೆ ಹಲವು ಬಾರಿ ಜಗಳ ಮಾಡಿದ್ದಾಳೆ. ಈ ಕಾರಣದಿಂದ ಇತ್ತೀಚೆಗೆ ಈಕೆ ತನ್ನ ಮಕ್ಕಳ ಜೊತೆ ತವರು ಮನೆ ಸೇರಿದ್ದಳು.

ಈ ಕುರಿತು ನೆಲ್ಲೈ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತು. ನಂತರ ಪೊಲೀಸರು ಇಬ್ಬರ ಜೊತೆ ರಾಜಿ ಮಾತುಕತೆ ಮಾತನಾಡಿ ಕಳುಹಿಸಿದ್ದಾರೆ. ನಂತರ ಮುತ್ತುಲಕ್ಷ್ಮೀ ನಾಲ್ಕು ದಿನಗಳ ಹಿಂದೆ ವಾಪಾಸ್‌ ಗಂಡನ ಮನೆಗೆ ಹೋಗಿದ್ದಾಳೆ. ಆದರೆ ಮತ್ತೆ ಇವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಜಗಳ ಜೋರಾಗಿದ್ದು, ಸಿಟ್ಟುಗೊಂಡ ಮುತ್ತುಲಕ್ಷ್ಮೀ ಕೊತ ಕೊತ ಕುದಿಯುತ್ತಿದ್ದ ಎಣ್ಣೆಯನ್ನು ಗಂಡನ ಮೇಲೆ ಸುರಿದೇ ಬಿಟ್ಟಿದ್ದಾಳೆ.

ಬಾಲಸುಬ್ರಮಣಿ ಬೊಬ್ಬೆ ಹೊಡೆದಿದ್ದು, ಈ ಶಬ್ದಕ್ಕೆ ನೆರೆಹೊರೆಯವರು ಬಂದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಶಿವಂತಿಪಟ್ಟಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಮುತ್ತುಲಕ್ಷ್ಮೀಯನ್ನು ಬಂಧನ ಮಾಡಿದ್ದಾರೆ.

You may also like