Hassana: ಅನ್ಯವ್ಯಕ್ತಿ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ಮನನೊಂದ ಪತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಮೃತ ವ್ಯಕ್ತಿ.
ಕೆಲ ದಿನಗಳ ಹಿಂದೆ ಅದೇ ಗ್ರಾಮದ ಪ್ರದೀಪ್ ಎಂಬಾತನ ಜೊತೆ ಪತ್ನಿ ಮಗು ಸಮೇತ ಎಸ್ಕೇಪ್ ಆಗಿದ್ದಳು. ಹೆಂಡತಿ ಪರಾರಿಯಾಗುತ್ತಿದ್ದಂತೆ ಹಲವಾರು ಕಡೆ ಹುಡುಕಾಟ ಮಾಡಲಾಗಿದೆ. ಆದರೆ ಆಕೆ ಎಲ್ಲೂ ಸಿಗದೇ ಹೋದ ಕಾರಣ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದಾರೆ.
ಆದರೆ ಯಾರೂ ಸರಿಯಾಗಿ ಸ್ಪಂದಿಸದ ಕಾರಣದಿಂದ ಮನನೊಂದ ಪತಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಕುರಿತು ವರದಿಯಾಗಿದೆ.
ಅಗ್ನಿಶಾಮದ ದಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಮೃತದೇಹಕ್ಕಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ.
