Home » Puttur: ಪುತ್ತೂರಿನಲ್ಲಿ ಕಾಡಾನೆ ದಾಳಿ; ಮಹಿಳೆ ದಾರುಣ ಸಾವು!

Puttur: ಪುತ್ತೂರಿನಲ್ಲಿ ಕಾಡಾನೆ ದಾಳಿ; ಮಹಿಳೆ ದಾರುಣ ಸಾವು!

0 comments

Puttur: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲನಿ ಬಳಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮುಂಜಾನೆ ರಬ್ಬರ್‌ ಟ್ಯಾಪಿಂಗ್‌ಗೆಂದು ಬಂದಿದ್ದ ಅರ್ತಿಯಡ್ಕದ ಮಹಿಳೆಯೊಬ್ಬರು ಮೇಲೆ ಮಂಗಳವಾರ (ಎ.29) ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಯಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸೇಲಮ್ಮ (60) ಮೃತ ಮಹಿಳೆ.

ರಬ್ಬರ್‌ ಟ್ಯಾಪಿಂಗ್‌ಗೆಂದು ಮುಂಜಾನೆ ಬಂದಿದ್ದ ಮಹಿಳೆ  ಮೇಲೆ ಆನೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಸೇಲಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾಡಾನೆ ಪ್ರತ್ಯಕ್ಷಗೊಂಡ ಪರಿಣಾಮ ಮಹಿಳೆ ಜೊತೆಗಿದ್ದ ಇತರರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಸೇಲಮ್ಮ ಅವರಿಗೆ ವಯಸ್ಸಾದ ಕಾರಣ ಓಡಲು ಸಾಧ್ಯವಾಗದೇ ಇದ್ದ ಕಾರಣ ಕಾಡಾನೆ ದಾಳಿ ಮಾಡಿ ಕೊಂದೆ.

You may also like