Elephant attack: ಚಲಿಸುತ್ತಿದ್ದ ಆಟೋದ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆ ಸಮೀಪ ನಡೆದಿರುತ್ತದೆ.
ಇಂಜಿಲಗೆರೆ ನಿವಾಸಿ ಪ್ರದೀಪ್ ಎಂಬವರು ಬೆಳಿಗ್ಗೆ 7:30 ಸಮಯಕ್ಕೆ ಆಟೋ ರಿಕ್ಷದಲ್ಲಿ ಕೆಲಸಕ್ಕೆ ತೆರಳುತ್ತಿರುವ ಸಂದರ್ಭ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕಾಲಿಗೆ ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಪ್ರದೀಪನನ್ನು ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಿದ್ದಾಪುರ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಇಲ್ಲದ ಕಾರಣ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಅವರು ವೈದ್ಯಾಧಿಕಾರಿಗಳ ಬಳಿ ಚರ್ಚೆ ನಡೆಸಿ ತಕ್ಷಣವೇ ಅಮ್ಮತ್ತಿ ಯ ಆರ್.ಐ.ಹೆಚ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಸಕ ಪೊನ್ನಣ್ಣನವರ ನೇತೃತ್ವದಲ್ಲಿ ಶಾಶ್ವತ ಯೋಜನೆಯನ್ನು ರೂಪಿಸುವ ಕ್ರಮ ನಡೆಯುತ್ತಿದೆ ಎಂದು ಸಂಕೇತ್ ತಿಳಿಸಿದರು.
