Home » Sullia: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ

Sullia: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ

0 comments

Sullia; ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ಇಂದು (ಡಿ.17) ಬೆಳಗ್ಗೆ ಕಾಡಾನೆ ದಾಳಿಯೊಂದಕ್ಕೆ ಅಯ್ಯಪ್ಪ ವ್ರತಧಾರಿಯೋರ್ವರು ಗಾಯಗೊಂಡ ಘಟನೆಯೊಂದು ನಡೆದಿದೆ.

ಅಯ್ಯಪ್ಪ ವ್ರತಧಾರಿ ಚರಿತ್‌ ಎಂಬುವವರು ಗಾಯಗೊಂಡವರು. ತೀವ್ರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆನ್ನು ಮತ್ತು ತಲೆಯ ಭಾಗಕ್ಕೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.

You may also like

Leave a Comment