Home » Electric Vehicles (EVs): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಆಮದು ಸುಂಕ ಇಳಿಕೆ?ಯಾಕೆ?

Electric Vehicles (EVs): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಆಮದು ಸುಂಕ ಇಳಿಕೆ?ಯಾಕೆ?

0 comments

Electric Vehicles (EVs): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯಡಿಯಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಸೋಮವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕಂಪನಿಗಳು ಸ್ಥಳೀಯ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 4,150 ಕೋಟಿ ರು. ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ಕಾರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ. ಈ ರೀತಿ ಮಾಡಿದಲ್ಲಿ ಪ್ರಸ್ತುತ ಇರುವ ಶೇ.70-100 ಆಮದು ಸುಂಕವನ್ನು ಶೇ.15ರಷ್ಟಕ್ಕೆ ಇಳಿಸುತ್ತೇವೆ ಎಂದಿದ್ದಾರೆ.

ಇನ್ನೂ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿಗಳು ಹೆಸರು ನೋಂದಾಯಿಸಿಕೊಳ್ಳಲು ಇನ್ನು 120 ದಿನಗಳ ಒಳಗೆ ಅರ್ಜಿ ಸ್ವೀಕೃತಿಯನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರು ತಯಾರಿಕಾ ಕಂಪೆನಿ ಕೇವಲ ಭಾರತದಲ್ಲಿ ತಮ್ಮ ಶೋ ರೂಮ್ ತೆರೆಯಲು ಉತ್ಸುಕರಾಗಿದ್ದಾರೆ ಹೊರತು ಉತ್ಪಾದನೆ ಮಾಡಲಲ್ಲ ಎಂದು ಸಚಿವ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಾಗಿ ಟೆಸ್ಲಾ ಪ್ರತಿನಿಧಿಯು ಮೊದಲ ಸುತ್ತಿನ ಪಾಲುದಾರರ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ಆದರೆ 2ನೇ ಮತ್ತು 3ನೇ ಸುತ್ತಿನ ಚರ್ಚೆಗಳಲ್ಲಿ ಭಾಗವಹಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like