Home » Retirement age: ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ?

Retirement age: ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ?

0 comments

Retirement age: ಸರ್ಕಾರ ನೌಕರರ ನಿವೃತ್ತಿ ವಯಸ್ಸಿನ ಮಿತಿಯನ್ನು ಏರಿಕೆ ಮಾಡುವ ವಿಚಾರ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚಿಗಷ್ಟೇ ಸರ್ಕಾರ ಡಿಎ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಈ ವಿಚಾರಕ್ಕೆ ಮುಂದಾಗಿದ್ದು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆಗೆ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು 60 ವರ್ಷಗಳು. ಈ ನಿವೃತ್ತಿ ವಯಸ್ಸಿನ ಮಿತಿ ಏರಿಕೆ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇನ್ನೂ ಬೋಧನೆ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ಕೆಲವು ಕ್ಷೇತ್ರಗಳಲ್ಲಿ, ಇದು 65 ವರ್ಷಗಳವರೆಗೆ ಮುಂದುವರೆದಿದೆ. ಇನ್ನೂ ರಾಜ್ಯ ಸರ್ಕಾರಗಳು ತಮ್ಮದೇ ಆದ ನಿವೃತ್ತಿ ನೀತಿಗಳನ್ನು ನಿಗದಿಪಡಿಸುತ್ತವೆ ಎಂದು ಹೇಳಲಾಗಿದೆ.

ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಿಸ್ತರಿಸುವ ನಿರ್ಧಾರವು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಇದು ವಿವಿಧ ವಲಯಗಳಿಗೆ ತಮ್ಮ ಪರಿಣತಿಯನ್ನು ನೀಡುವುದನ್ನು ಮುಂದುವರಿಸಬಹುದಾದ ಅನುಭವಿ, ಜ್ಞಾನವುಳ್ಳ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಸರ್ಕಾರದ ಮಟ್ಟದಲ್ಲಿನ ಕೆಲಸಗಳಿಗೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ.

You may also like