18
ಬಳ್ಳಾರಿ: ಆನ್‌ಲೈನ್‌ನಲ್ಲಿ ಬಟ್ಟೆ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 16.42 ಲಕ್ಷ ರೂ. ಪಡೆದು ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ದೂರುದಾರ ಮಹಿಳೆ, ಜ.2ರಂದು 1,240 ರೂ. ಆರ್ಡರ್ ಆನ್‌ಲೈನ್‌ನಲ್ಲಿ ಬಟ್ಟೆ ಮೌಲ್ಯದ ಮಾಡಿದ್ದರು. ಮರುದಿನ ಕರೆ ಮಾಡಿದ ವಂಚಕರು ಆರ್ಡರ್ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮರು ಆರ್ಡರ್ ಮಾಡಿ ಎಂದು ಹೇಳಿ ಹೊಸ ಲಿಂಕ್ ಕಳಿಸಿದ್ದಾರೆ.
ಹಿಂದಿನ ಆರ್ಡರ್‌ಗೆ ಸಂಬಂಧಿಸಿದ ಮರುಪಾವತಿಸು ಹಂತಹಂತವಾಗಿ ಹಣವನ್ನು ನೀಡುವುದಾಗಿ ನಂಬಿಸಿ, ಖಾತೆಗಳ ವಿವರ ಪಡೆದಿದ್ದಾರೆ. ಮಹಿಳೆಯ ವಿವಿಧ ಖಾತೆಗಳಿಂದ 16,42,336 ರೂ. ವರ್ಗಾಯಿಸಿ ಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳ್ಳಾರಿ ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
