Home » Women Suicide : ಪುತ್ತೂರು : ವಿವಾಹಿತೆ ಬಾವಿಗೆ ಬಿದ್ದು ಆತ್ಮಹತ್ಯೆ!

Women Suicide : ಪುತ್ತೂರು : ವಿವಾಹಿತೆ ಬಾವಿಗೆ ಬಿದ್ದು ಆತ್ಮಹತ್ಯೆ!

1 comment
Women committed Suicide

Women committed Suicide: ಇತ್ತೀಚೆಗೆ ಒತ್ತಡದಿಂದ ಮಾನಸಿಕ ಮನಸ್ಥಿತಿಯಿಂದ ಆತ್ಮಹತ್ಯೆಗೆ ಕೊರಳು ಒಡ್ಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಬೆಳ್ತಂಗಡಿಯ ಮಹಿಳೆಯೊಬ್ಬರು ಎಪ್ರಿಲ್. 10ರಂದು ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ತವರು ಮನೆಯವರ ಬಾವಿಗೆ ಬಿದ್ದು(Women committed Suicide) ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಎಪ್ರಿಲ್ 4ರಂದು ತವರು ಮನೆಗೆ ಪುಣ್ಯಶ್ರೀ ಬಂದಿದ್ದರು ಎನ್ನಲಾಗಿದೆ. ಎಪ್ರಿಲ್ 10ರಂದು ಪುಣ್ಯಶ್ರೀ ತನ್ನ ಪತಿಗೆ ವಿಡಿಯೋ ಕರೆ (Video Call)ಮಾಡಿ ಮಾತನಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಉದ್ದದಪಳಿಕೆ ಪುರುಷೋತ್ತಮ ಅವರ ಪತ್ನಿ ಪುಣ್ಯಶ್ರೀ ಮೃತಪಟ್ಟವರಾಗಿದ್ದು (Death), ಬೆಳ್ತಂಗಡಿಯ ಪುರುಷೋತ್ತಮ ಅವರು ಗುಮ್ಮಟಗದ್ದೆಯ ಬಾಲಕೃಷ್ಣ ಅವರು ಪುತ್ರಿ ಪುಣ್ಯಶ್ರೀಯವರನ್ನು 2017ರ ಜನವರಿ. 1ರಂದು ವರಿಸಿದ್ದರು. ಪುರುಷೋತ್ತಮ ಮತ್ತು ಪುಣ್ಯಶ್ರೀ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಏಪ್ರಿಲ್ 4ರಂದು ರಾತ್ರಿ ವೇಳೆ ಚಿಕ್ಕಮ್ಮ ಲತಾ ಅವರ ಮೊಬೈಲ್‌ಗೆ(Mobile) ಕರೆ ಮಾಡಿ ತಾನು ಸಾಯುವುದಾಗಿ ತಿಳಿಸಿ ಬಾವಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ತಿಳಿದ ಕೂಡಲೇ ಪುಣ್ಯಶ್ರೀಯವರನ್ನು ಬಾವಿಯಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಪುಣ್ಯ ಶ್ರೀ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸದ್ಯ, ಈ ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

You may also like

Leave a Comment