Home » Viral News: 17 ವರ್ಷದ ಬಾಲಕನೊಂದಿಗೆ ಮಾದುವೆ: 3 ಮಕ್ಕಳನ್ನು ಬಿಟ್ಟು ಬಂದು ಮತಾಂತರಗೊಂಡ ಮಹಿಳೆ

Viral News: 17 ವರ್ಷದ ಬಾಲಕನೊಂದಿಗೆ ಮಾದುವೆ: 3 ಮಕ್ಕಳನ್ನು ಬಿಟ್ಟು ಬಂದು ಮತಾಂತರಗೊಂಡ ಮಹಿಳೆ

0 comments

Viral News: 17 ವರ್ಷದ ಬಾಲಕನೊಂದಿಗೆ(Boy) ವಾಸಿಸಲು 26 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು(Muslim Woman) ತನ್ನ ಮೂರು ಮಕ್ಕಳನ್ನು ತೊರೆದು ಹಿಂದೂ ಧರ್ಮಕ್ಕೆ(Hindu) ಮತಾಂತರಗೊಂಡ ಘಟನೆ ಉತ್ತ ಪ್ರದೇಶದ(UP) ಅದ್ರೋಹದಲ್ಲಿರುವ ಸೈದಂಗಲಿಯಲ್ಲಿ ನಡೆದಿದೆ. ಈಗಾಗಲೇ 2 ಮದುವೆಯಾಗಿದ್ದ ಶಬ್ದಂಗೆ ನೆರೆಮನೆಯ ಅಪ್ರಾಪ್ತನೊಂದಿಗೆ ಪ್ರೀತಿ ಹುಟ್ಟಿದ ಕಾರಣ, ಎರಡನೇ ಪತಿಗೆ ವಿಚ್ಛೇದನ ನೀಡಿ ಮಕ್ಕಳನ್ನು ಆತನೊಂದಿಗೆ ಬಿಟ್ಟಿದ್ದಾಳೆ. ಶಬ್ದಂ ಮತಾಂತರಗೊಂಡ ಬಳಿಕ ಶಿವಾನಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ. ತಾನು ಸ್ವಂತ ಇಚ್ಛೆಯಿಂದ ನಿರ್ಧಾರ ತೆಗೆದುಕೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

26 ವರ್ಷ ವಯಸ್ಸಿನ ಶಬ್ದಂ 8 ವರ್ಷಗಳ ಹಿಂದೆ ಸೈದ್ ನಾಗ್ಲಿ ನಗರ ಪಂಚಾಯತ್ ನ ವ್ಯಕ್ತಿ ಜತೆ ಈಗಾಗಲೇ ಮದುವೆಯಾಗಿದ್ದರು. ಇವರಿಗೆ 3 ಹೆಣ್ಣು ಮಕ್ಕಳಿದ್ದಾರೆ. ಆದರೆ ದುರದೃಷ್ಟವಶಾತ್ ಶಬ್ದಂ ಅವರ ಗಂಡ, ರಸ್ತೆ ಅಪಘಾತದಲ್ಲಿ ಗಾಯಗೊಂಡು ದೈಹಿಕವಾಗಿ ದುರ್ಬಲರಾಗಿದ್ದರು. ಒಂದು ವರ್ಷದ ಹಿಂದೆ ಶಬ್ದಂಗೆ ನೆರೆಮನೆಯ 17 ವರ್ಷದ ಬಾಲಕನ ಪರಿಚಯವಾಗುತ್ತದೆ. ಅಪ್ರಾಪ್ತ ಜತೆಗಿನ ಪರಿಚಯ ಪ್ರೇಮವಾಗಿ ಬದಲಾಗಿದೆ.
ಮೂರು ಮಕ್ಕಳ ತಾಯಿ ಶಬ್ದಂ ಅಪ್ರಾಪ್ತನ ಜತೆ ಸಲುಗೆಯಿಂದ ಇರುವ ವಿಚಾರ ಊರಿಗೆಲ್ಲಾ ಪ್ರಚಾರ ಆಗಿದೆ. ಇದನ್ನು ತಿಳಿದ ಊರ ಮುಖ್ಯಸ್ಥರು ಪಂಚಾಯತ್ ಕರೆದು ಈ ಬಗ್ಗೆ ಪಂಚಾಯತಿ ಮಾಡುತ್ತಾರೆ. ಇಲ್ಲಿ ಶಬ್ದಂ, ತಾನು ಬಯಸಿದವರೊಂದಿಗೆ ವಾಸಿಸಬಹುದು ಎಂದು ಪಂಚಾಯತ್ ತೀರ್ಮಾನಿಸಿದೆ. ಹಾಗಾಗಿ ಶಬ್ದಂ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ, ತನ್ನ ಮಕ್ಕಳನ್ನು ಅವನ ಆರೈಕೆಯಲ್ಲಿ ಬಿಟ್ಟು ಅಪ್ರಾಪ್ತ ಬಾಲಕನ ಜೊತೆ ಬಾಳಲು ನಿರ್ಧರಿಸುತ್ತಾಳೆ. ಆದರೆ ಬಾಲಕ ಅಪ್ರಾಪ್ತವಾಘಿರುವ ಕಾರಣ, ಅವರಿಬ್ಬರು ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗಿಲ್ಲ.

You may also like