2
Belthangady: ವೃದ್ಧ ಮಹಿಳೆಯೋರ್ವರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ (Belthangady) ನಾರ್ಯ ಗ್ರಾಮದಲ್ಲಿ ನಡೆದಿದೆ. ನಾರ್ಯ ನಿವಾಸಿ, ಶಾಂತ ಮೃತಪಟ್ಟ ದುರ್ದೈವಿ.
ಮನೆಯ ಹಿಂಬದಿಯಲ್ಲಿ ಇವರು ಬಟ್ಟೆ ತೊಳೆಯಲು ಸಾಬೂನು ತೆಗೆಯುವ ಸಂದರ್ಭ ಕಿಟಕಿಯಲ್ಲಿದ್ದ ವಿಷದ ಹಾವು ಎಡಗೈಯ ಕಿರುಬೆರಳಿಗೆ ಕಚ್ಚಿತ್ತು. ಮನೆಯಲ್ಲೇ ಪ್ರಥಮ ಚಿಕಿತ್ಸೆ ಮಾಡಿ ಉಜಿರೆ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
