Home » Mangaluru: ಮಂಗಳೂರು: ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು: ದೂರು ದಾಖಲು!

Mangaluru: ಮಂಗಳೂರು: ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು: ದೂರು ದಾಖಲು!

0 comments

Mangaluru: ಮಹಿಳೆ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಪದ್ಮಾಬಾಯಿ(45) ಎಂಬವರು ತಂಗಿ ಶಿಲ್ಪಾ ಜೊತೆ ಮಾತನಾಡಿದಾಗ ಸೊಂಟ ನೋವು ಆಗುತ್ತಿದೆ ಎಂದು ಹೇಳಿದ್ದರು.

ರಾತ್ರಿ ಪದ್ಮಾಬಾಯಿರವರ ಮಗ ಈಶ, ಶಿಲ್ಪಾರವರಿಗೆ ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದರು. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂ.19ರಂದು ಬೆಳಗ್ಗೆ ಈಶಾ, ಶಿಲ್ಪಾ ಅವರಿಗೆ ಕರೆ ಮಾಡಿ, ತಾಯಿ ಬೆಳಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು.ಹಾಗೆ ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅವರ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:Kisan samman: ರೈತರಿಗೆ ಗುಡ್ ನ್ಯೂಸ್ : ಕಿಸಾನ್ ಸಮ್ಮಾನ್ 20ನೇ ಕಂತು ಈ ದಿನಾಂಕದಂದು ಖಾತೆಗೆ ಜಮೆಯಾಗಲಿದೆ!

 

You may also like