Home » Tamilunadu : 22 ತಿಂಗಳಲ್ಲಿ 300 ಲೀಟರ್ ‘ಎದೆ ಹಾಲು’ ದಾನ ಮಾಡಿದ ಮಹಿಳೆ!!

Tamilunadu : 22 ತಿಂಗಳಲ್ಲಿ 300 ಲೀಟರ್ ‘ಎದೆ ಹಾಲು’ ದಾನ ಮಾಡಿದ ಮಹಿಳೆ!!

0 comments

Tamilunadu : ತಮಿಳುನಾಡಿನ ಮಹಿಳೆಯೊಬ್ಬರು ಕೇವಲ ತಮ್ಮ ಮಕ್ಕಳಿಗೆ ಹಾಲುಣಿಸುವುದಲ್ಲದೇ 22 ತಿಂಗಳಲ್ಲಿ ಬರೋಬ್ಬರಿ 300 ಲೀಟರ್‌ ಎದೆ ಹಾಲನ್ನು ದಾನ ಮಾಡಿ ಹಲವು ಮಕ್ಕಳ ಜೀವ ಉಳಿಸಿ ಗ್ರೇಟ್ ಎನಿಸಿಡಿದಲ್ಲದೆ, ದಾಖಲೆ ಬರೆದಿದ್ದಾರೆ.

ಹೌದು, ಇಬ್ಬರು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, ಏಪ್ರಿಲ್ 2023 ರಿಂದ ಫೆಬ್ರವರಿ 2025 ರವರೆಗೆ 22 ತಿಂಗಳಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (MGMGH) ಹಾಲಿನ ಬ್ಯಾಂಕ್ಗೆ ಒಟ್ಟು 300.17 ಲೀಟರ್ ಹಾಲು ದಾನ ಮಾಡಿದ್ದಾರೆ.

ಸೆಲ್ವ ಬೃಂದಾ (33)ರ ಈ ಸಾಧನೆ ಏಷ್ಯಾ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಕಳೆದ ವರ್ಷ ಆಸ್ಪತ್ರೆಯ ಒಟ್ಟು ಹಾಲಿನಲ್ಲಿ ಇವರ ಪಾಲು ಅರ್ಧದಷ್ಟಿತ್ತು. ಈ ಸಾಧನೆಗಾಗಿ ಆ.7ರ ವಿಶ್ವ ಸ್ತನ್ಯಪಾನ ಸಪ್ತಾಹದಂದು ಸನ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೆಲ್ವ ಬೃಂದಾ, “ನಾನು 300 ಲೀಟರ್ ಎದೆ ಹಾಲು ದಾನ ಮಾಡಿದ್ದೇನೆ. ಭಾರತದಲ್ಲಿ ಒಬ್ಬ ವ್ಯಕ್ತಿಯಿಂದ ಅತಿ ಹೆಚ್ಚು ಎದೆ ಹಾಲು ದಾನ ಮಾಡಿದ್ದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದೇನೆ” ಎಂದು ಹೇಳಿದರು.

ಇದನ್ನು ಓದಿ: CTCT: ಶಿಕ್ಷಕ ಹುದ್ದೆ ಆಕಾಂಕ್ಷೆಗಳೇ ಗಮನಿಸಿ – ಇನ್ಮುಂದೆ ಈ ಪರೀಕ್ಷೆ ಪಾಸ್ ಆಗೋದು ಕಡ್ಡಾಯ.!

You may also like