Home » Bengaluru : ನಡು ರಸ್ತೆಯಲ್ಲಿ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ‘ಉತ್ತರದ’ ಯುವತಿ !! ವಿಡಿಯೋ ವೈರಲ್

Bengaluru : ನಡು ರಸ್ತೆಯಲ್ಲಿ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ‘ಉತ್ತರದ’ ಯುವತಿ !! ವಿಡಿಯೋ ವೈರಲ್

0 comments

Bengaluru : ದಿನೇ ದಿನೇ ರಾಜಧಾನಿ ಬೆಂಗಳೂರಲ್ಲಿ ಉತ್ತರ ಭಾರತದ ಹಿಂದಿವಾಲಗಳು ಸೇರಿದಂತೆ ಹೊರ ರಾಜ್ಯದವರ ಮಾನಗೆಟ್ಟ ವರ್ತನೆ ಮತ್ತು ದಬ್ಬಾಳಿಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೈನಲ್ ಆಗುತ್ತಿದೆ.

ಬೆಂಗಳೂರಿನ ಸದ್ಯದ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಜನರಿಗಿಂತ ವಾಹನಗಳೇ ಹೆಚ್ಚಾಗಿವೆ. ಟ್ರಾಫಿಕ್ ಸಮಯದಲ್ಲಿ ಹೇಗಪ್ಪ ಹೋಗುವುದು ಎಂಬ ತಲೆನೋವು ಕಾಡುತ್ತದೆ. ಚೂರು ಜಾಗ ಸಿಕ್ಕಿದರೂ ಸಾಕು ಎಂದು ನುಗ್ಗುವ ಅನೇಕರು ಬೆಂಗಳೂರಿನಲ್ಲಿ ಕಾಣಬಹುದು. ಇಂತಹ ಸಮಯದಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತವೆ. ಅಂತೆಯೇ ಇದೀಗ ಸ್ಕೂಟಿ ಒಂದಕ್ಕೆ ಆಟೋ ಟಚ್ ಆಗಿದ್ದಕ್ಕೆ ಹೊರ ರಾಜ್ಯದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಅಸಭ್ಯವಾಗಿ, ಅನಾಗರೀಕಳಂತೆ ವರ್ತಿಸಿದ್ದಾಳೆ.

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವಂತೆ ಯುವತಿ ತನ್ನ ಗಾಡಿಯಲ್ಲಿ ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಆಟೋ ಯುವತಿಯ ಗಾಡಿ ಹತ್ತಿರಕ್ಕೆ ಬಂದಿದ್ದು, ಈ ವೇಳೆ ಯುವತಿ ಆಟೋ ತನ್ನ ಗಾಡಿಗೆ ಟಚ್ ಆಯಿತು ಎಂದು ಜಗಳ ತೆಗೆದಿದ್ದಾಳೆ. ಈ ವೇಳೆ ಆಟೋ ಚಾಲಕ ತಾನು ಟಚ್ ಮಾಡಿಲ್ಲ ವಾದಿಸಿದರೂ ಕೇಳದ ಯುವತಿ ನೋಡ ನೋಡುತ್ತಲೇ ತನ್ನ ಚಪ್ಪಲಿ ತೆಗೆದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಸದ್ಯ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

You may also like