Home » ಪತಿಯನ್ನು ಕೊಂದು ಮನೆಯಲ್ಲೇ ಶವ ಸುಡಲು ಮಹಿಳೆ ಯತ್ನ; ಪೊಲೀಸರನ್ನು ತಡೆಯಲು ಮನೆ ಬಾಗಿಲಿಗೆ ಕರೆಂಟ್ ಕೊಟ್ಟ ಮಹಿಳೆ !

ಪತಿಯನ್ನು ಕೊಂದು ಮನೆಯಲ್ಲೇ ಶವ ಸುಡಲು ಮಹಿಳೆ ಯತ್ನ; ಪೊಲೀಸರನ್ನು ತಡೆಯಲು ಮನೆ ಬಾಗಿಲಿಗೆ ಕರೆಂಟ್ ಕೊಟ್ಟ ಮಹಿಳೆ !

0 comments

ಮಹಿಳೆಯೊಬ್ಬರು ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಾಳೆ. ಅಲ್ಲದೆ ಈ ಆರೋಪಿ ಮಹಿಳೆ ಒಳಗಿನಿಂದ ಬೀಗ ಹಾಕಿಕೊಂಡು, ಪೊಲೀಸರು ಒಳ ನುಗ್ಗದಂತೆ ತಡೆಯಲು ಬಾಗಿಲಿಗೆ ವಿದ್ಯುತ್ ಕೊಟ್ಟಿದ್ದಾಳೆ. (Woman Kills Husband, Electrifies Door to Stop Police)

ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಓಲ್ಡ್ ಸುಭಾಷ್ ಕಾಲೋನಿಯಲ್ಲಿ ಇಂದು ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಪತಿಯನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಆತನು ಸಾರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತನ್ನನ್ನು ತಾನು ತೊಡಗಿಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಉದ್ಯೋಗ – ಅಧ್ಯಯನಕ್ಕಾಗಿ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಮೃತರ ಮನೆಯಿಂದ ದುರ್ವಾಸನೆ ಬರಲಾರಂಭಿಸಿತ್ತು. ಆಗ ನೆರೆಹೊರೆಯವರು ಪುಣೆಯಲ್ಲಿ ವಾಸಿಸುವ ಈ ದಂಪತಿಯ ಮಗನಿಗೆ ವಿಚಾರ ತಿಳಿಸಿದಾಗ ಆತ ಸಹಾಯಕ್ಕೆ ಪೊಲೀಸರನ್ನು ಕೇಳಿಕೊಂಡಿದ್ದಾನೆ. ಆಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಮಹಿಳೆ ಮನೆಯ ಬಾಗಿಲಿಗೆ ವಿದ್ಯುತ್ ತಗುಲಿಸಿ ಕೂತಿದ್ದಳು. ಆಗ ಪೊಲೀಸರು ಮನೆಯ ಛಾವಣಿ ಮೇಲೆ ಹತ್ತಬೇಕಾಯಿತು. ನಂತರ ಕೋಲು ಹಿಡಿದು ಒಳಗೆ ಶವದ ಜತೆ ಕೂತಿದ್ದ ಆಕೆಯನ್ನು ಬೆದರಿಸಿದ್ದಾರೆ. ಮೃತರು ಕಳೆದ ನಾಲ್ಕೈದು ದಿನಗಳಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ ಎನ್ನುವುದು ನೆರೆಹೊರೆಯವರ ಹೇಳಿಕೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದೀಗ ಆರೋಪಿ ಮೀರಾ ಸಿಂಗ್‌ರನ್ನು ಬಂಧಿಸಲಾಗಿದೆ. ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಪೊಲೀಸರು ಅತ್ಯಂತ ಪ್ರಯಾಸದಿಂದ ಮನೆಯೊಳಗೆ ಪ್ರವೇಶಿಸಿ ಅರ್ಧ ಸುಟ್ಟ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಮೀರಾ ಮಾನಸಿಕ ಅಸ್ವಸ್ಥಳಾಗಿದ್ದು, ದಂಪತಿ ಮಧ್ಯೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.

 

You may also like

Leave a Comment