Bihar: ಬಿಹಾರದಲ್ಲಿ ಒಂದು ಅಚ್ಚರಿಯ ಪ್ರೇಮ ಪ್ರಸಂಗ ಬೆಳಕಿಗೆ ಬಂದಿದ್ದು ಒಬ್ಬ ವಿವಾಹಿತ ಮಹಿಳೆ ತನ್ನ ಗಂಡ ಮತ್ತು ಮುಗ್ಧ ಮಗಳನ್ನು ತೊರೆದು ತನ್ನ ಭಾವನೊಂದಿಗೆ ಮದುವೆಯಾಗಿದ್ದಾಳೆ.
ಬಿಹಾರದ ಜಮುಯಿ ಜಿಲ್ಲೆಯ ಪಾಟ್ನಾದ ರಾಜೀವ್ ನಗರದ ಆಯುಷಿ ಕುಮಾರಿ ಅವರ ಮೊದಲ ಮದುವೆ 2021 ರಲ್ಲಿ ವಿಶಾಲ್ ದುಬೆ ಅವರೊಂದಿಗೆ ನಡೆದಿತ್ತು, ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಆಯುಷಿ ಕದ್ದುಮುಚ್ಚಿ ಅದೇ ಗ್ರಾಮದ ಸಚಿನ್ ದುಬೆ ಎನ್ನುವವನ ಜತೆ ಸಂಬಂಧವನ್ನು ಇಟ್ಟುಕೊಂಡಿದ್ದಳು. ಸಚಿನ್ ದುಬೆ ಆಯುಷಿ ಅವರ ಸಂಬಂಧಿಯಾಗಿದ್ದಾನೆ. (ಸೋದರಳಿಯ)
ಸಚಿನ್ – ಆಯುಷಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾಗಿದ್ದರು. ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಪ್ರೀತಿಗೆ ತಿರುಗಿದೆ. ಆಗಾಗ ಯಾರಿಗೂ ಗೊತ್ತಾಗದ ರೀತಿಯಲ್ಲಿ ಭೇಟಿ ಆಗುತ್ತಿದ್ದರು. ಜೂನ್ 15 ರಂದು ಸಚಿನ್ – ಆಯುಷಿ ಇಬ್ಬರು ಓಡಿ ಹೋಗಿದ್ದಾರೆ. ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ವಿಶಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ನಂತ್ರ ಆಯುಷಿ ಜಮುಯಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಗಳನ್ನು ತನ್ನ ಜತೆ ಇರಿಸಲು ಆಯುಷಿ ನಿರಾಕರಿಸಿದ್ದಾಳೆ ಎಂದು ವರದಿ ತಿಳಿಸಿದೆ.
ಇನ್ನು ಎರಡೂ ಕುಟುಂಬಕ್ಕೆ ತಮ್ಮ ಅಕ್ರಮ ಸಂಬಂಧದ ವಿಷಯ ತಿಳಿಸಿ, ಅವರ ಒಪ್ಪಿಗೆ ಪಡೆದು ಶುಕ್ರವಾರ ಸಂಜೆ ಹಳ್ಳಿಯ ದೇವಸ್ಥಾನದಲ್ಲಿ ಸಚಿನ್ ಅವರನ್ನು ಆಯುಷಿ ವಿವಾಹವಾಗಿದ್ದಾರೆ. ‘ನಾವು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಈಗ ನಮ್ಮ ಸಂಬಂಧಕ್ಕೆ ಒಂದು ಹೆಸರಿದೆ. ನಾನು ಆಯುಷಿಯನ್ನು ಶಾಶ್ವತವಾಗಿ ಸಂತೋಷವಾಗಿರಿಸುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.
ಇದನ್ನೂ ಓದಿ:Kashmir: ಪಹಲ್ಗಾಂ ದಾಳಿ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಅರೆಸ್ಟ್! ಸ್ಫೋಟಕ ಮಾಹಿತಿ ಬಹಿರಂಗ
