3
Festival: ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರವಾಗಿದ್ದಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಚೈತ್ರ ನವರಾತ್ರಿ ಆಚರಣೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ 36 ವರ್ಷದ ಪ್ರಿಯಾಂಶ ಸೋನಿ ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಪ್ರಿಯಾಂಶ ಸೋನಿ ತನ್ನ ಪತಿ ಮುಖೇಶ್ ಸೋನಿ ತನ್ನ ಇಬ್ಬರು ಹೆಣ್ಣುಮಕ್ಕಳಾದ ಜಾನ್ವಿ ಮತ್ತು ಮಾನ್ವಿ ಜೊತೆ ವಾಸವಾಗಿದ್ದು, ಈಕೆಯ ಪತಿ ಮುಖೇಶ್ ಹೇಳಿರುವ ಪ್ರಕಾರ, ನವರಾತ್ರಿಗೆ ಉತ್ಸಾಹದಿಂದ ತಯಾರಿ ಮಾಡಿಕೊಂಡಿದ್ದರು. ಆದರೆ ಮೊದಲ ದಿನವೇ ಆಕೆಗೆ ಮುಟ್ಟು ಕಾಣಿಸಿಕೊಂಡಿತ್ತು. ಉಪವಾಸ, ಪೂಜೆ ಎರಡನ್ನೂ ಮಾಡಲು ಸಾಧ್ಯವಾಗದ್ದಕ್ಕೆ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದು, ಈಕೆಯನ್ನು ನಾನು ಸಮಾಧಾನ ಕೂಡಾ ಮಾಡಿದ್ದೆ. ಆದರೆ ಆಕೆ ಈ ನಿರ್ಧಾರ ಮಾಡಿಕೊಂಡಿದ್ದಾಳೆ ಎಂದು ಹೇಳಿರುವುದಾಗಿ ವರದಿಯಾಗಿದೆ.
