Home » Himachal Pradesh: ಜಲಪಾತದ ಕೆಳಗೆ ಅಸಭ್ಯ ಕೃತ್ಯ- ವಿಡಿಯೋ ಹಂಚಿಕೊಂಡ ಮಹಿಳೆ !!

Himachal Pradesh: ಜಲಪಾತದ ಕೆಳಗೆ ಅಸಭ್ಯ ಕೃತ್ಯ- ವಿಡಿಯೋ ಹಂಚಿಕೊಂಡ ಮಹಿಳೆ !!

by V R
0 comments

Himachal Pradesh : ಇದೀಗ ಪ್ರವಾಸದ ಸೀಜನ್. ಮಳೆಗಾಲ ಎಂದ ಕ್ಷಣ ಅನೇಕರು ಸುಂದರ ತಾಣಗಳನ್ನು ನೋಡಲು ಮನೆಯಿಂದ ಹೊರಡುತ್ತಾರೆ. ಆದರೆ ಅಲ್ಲಿಗೆ ತೆರಳಿದ ಬಳಿಕ ನಾವು ಹೇಗೆ ವರ್ತಿಸಬೇಕು, ಅಲ್ಲಿನ ಪರಿಸರವನ್ನು ಹಾಳುಮಾಡದೇ ಅದನ್ನು ಸ್ವಚ್ಛವಾಗಿ ಇಡಲು ಏನೆಲ್ಲ ಮಾಡಬೇಕು ಎಂಬುದನ್ನೇ ಮರೆಯುತ್ತಾರೆ. ಇದೀಗ ಜಲಪಾತ ನೋಡಲು ತೆರಳಿದ ಒಂದು ತಂಡ ಅಸಭ್ಯ ಕೃತ್ಯದಲ್ಲಿ ತೊಡಗಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

 

ಹೌದು, ಹಿಮಾಚಲ ಪ್ರದೇಶ ಭಾರತದ ಒಂದು ಸುಂದರ ಪ್ರವಾಸಿ ತಾಣ. ನೈಸರ್ಗಿಕ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಪ್ರತಿದಿನ ಅನೇಕ ಜನರು ಭೇಟಿ ನೀಡುತ್ತಾರೆ. ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಲ್ಯಾಪಾಜ್ ಜಲಪಾತವೂ ಒಂದು. ಈ ಜಲಪಾತದ ವೀಕ್ಷಣೆಗೆಂದು ತೆರಳಿದ ಮಹಿಳೆ ಒಬ್ಬರು ಅಲ್ಲಿ ನಡೆಯುತ್ತಿದ್ದ ಕೃತ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕಂಡು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೆಲವರು ಪ್ರವಾಸಿಗರು ಧುಮ್ಮಿಕ್ಕುವ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಕೆಲವು ಯುವಕರು ಟೇಬಲ್ ಮತ್ತು ಕುರ್ಚಿಗಳ ಮೇಲೆ ಮದ್ಯ ಸೇವಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಅರಣ್ಯ ಪ್ರದೇಶಗಳಲ್ಲಿ ಮದ್ಯ ಸೇವಿಸಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಯುವಕರು ಅಸಭ್ಯ ಕೃತ್ಯದಲ್ಲಿ ತೊಡಗಿದ್ದಾರೆ. ವಿಡಿಯೋ ಹಂಚಿಕೊಂಡ ಬೆನ್ನಲ್ಲೆ, ಸೋಷಿಯಲ್‌ ಮೀಡಿಯಾದಲ್ಲಿ, ಕುಟುಂಬ ಸಮೇತ ಜಲಪಾತಕ್ಕೆ ಬರುವ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟುಮಾಡುವ ಮತ್ತು ಪ್ರಕೃತಿಯ ಹಸಿರನ್ನು ಹಾಳು ಮಾಡುತ್ತಿರುವ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ.

You may also like