PUBG Love: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳೆಯೊಬ್ಬಳು ಆನ್‌ಲೈನ್ ಗೇಮ್ PUBG ಆಡುವಾಗ ಭೇಟಿಯಾದ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಲುಧಿಯಾನ ಮೂಲದ ಶಿವಂ ಎಂಬ ವ್ಯಕ್ತಿ, ಆಕೆಯನ್ನು ಭೇಟಿಯಾಗಲು 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣ ಮಾಡಿ ಆಕೆಯನ್ನು ಸೇರಿದ್ದಾನೆ.
एक हजार किलोमीटर दूर से शादी शुदा प्रेमिका के पास पहुंचा प्रेमी
ऑनलाइन गेम पब्जी खेलने के दौरान हुई थी दोनों की मुलाकात
शादी के 3 साल बाद बच्चे और पति को छोड़कर प्रेमी के साथ जाने की जिद पर अड़ी प्रेमिका
प्रेमिका के पति की शिकायत पर पुलिस ने प्रेमी के खिलाफ क़ी… pic.twitter.com/aHjDsbnRy0
— News1India (@News1IndiaTweet) June 26, 2025
ಬಂದಾ ಜಿಲ್ಲೆಯ ಆರಾಧನಾ ಎಂಬ ಹೆಸರಿನ ಮಹಿಳೆ 2022 ರಲ್ಲಿ ಮಹೋಬಾದ ಶೀಲು ಎಂಬುವವನ್ನು ಮದುವೆಯಾಗಿದ್ದು, ಇವರಿಬ್ಬರಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ವರದಿಗಳ ಪ್ರಕಾರ, ಮದುವೆಯಾದ ಕೆಲವು ತಿಂಗಳ ನಂತರ ಆರಾಧನಾ PUBG ಗೇಮ್ ಆಡಲು ಶುರು ಮಾಡಿದ್ದು ಮತ್ತು ಆನ್‌ಲೈನ್ ನಲ್ಲಿ ಶಿವಂ ಜೊತೆ ಸ್ನೇಹ ಬೆಳೆಸಿದ್ದು ಇಬ್ಬರು ಪ್ರೀತಿಸಲು ತೊಡಗಿದ್ದಾರೆ.
“ಆರಾಧನಾ ಜೊತೆ 14 ತಿಂಗಳಿಗೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದೇನೆ” ಎಂದು ಶಿವಂ ಹೇಳಿಕೊಂಡಿದ್ದಾನೆ. “ಇತ್ತೀಚೆಗೆ, ತನ್ನ ಪತಿ ಅವಳನ್ನು ಹೊಡೆದಿದ್ದಾನೆಂದು ಅವಳು ನನಗೆ ಹೇಳಿದಳು. ಹಾಗಾಗಿ ಅವಳನ್ನು ನೋಡಲು ಮಹೋಬಾಗೆ ಬಂದೆ” ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆಂದು ವರದಿಯಾಗಿದೆ.
ಪ್ರೇಮಿ ತನ್ನ ಪ್ರೇಯಸಿಯನ್ನು ನೋಡಲು ಆಕೆಯ ಗಂಡನಿಗೆ ಬಂದಾಗ ಆಕೆಯ ಪತಿ ಶೀಲು ಮತ್ತು ಅವನ ಕುಟುಂಬ ಈತನನ್ನು ನೋಡಿ ಶಾಕ್ ಗೊಳಗಾದರು. ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಪೊಲೀಸರನ್ನು ಕರೆಸಿ ಶಿವಂನನ್ನು ವಶಕ್ಕೆ ಪಡೆಯಲಾಯಿತು.
ಘಟನೆ ಅಲ್ಲಿಗೆ ಮುಗಿಯಲಿಲ್ಲ. ಆರಾಧನಾ ಅವರನ್ನು ಸದರ್ ತಹಸಿಲ್‌ನಲ್ಲಿರುವ ಎಸ್‌ಡಿಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ಆಕೆ “ನಾನು ನನ್ನ ಪ್ರೇಮಿಯೊಂದಿಗೆ ಹೋಗಲು ಬಯಸುತ್ತೇನೆ” ಎಂದು ಹೇಳಿದಳು. ತಮ್ಮ ಪತಿ ಮದ್ಯವ್ಯಸನಿ ಮತ್ತು ದೌರ್ಜನ್ಯ ಎಸಗುವ ವ್ಯಕ್ತಿ ಎಂದು ಈಕೆ ಆರೋಪ ಮಾಡಿದ್ದಾಳೆ. ಹಾಗಗೂ ಪ್ರಿಯಕರನ ಜೊತೆ ಹೋಗಿದ್ದಾಳೆ. ಈ ವಿಷಯ ತಿಳಿದ ಪತಿ ಶೀಲು ಆರಾಧನಾಗೆ ಕರೆ ಮಾಡಿದಾಗ, ಮೀರತ್‌ನಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಉಲ್ಲೇಖಿಸಿ, “ನೀನು ನಮ್ಮ ನಡುವೆ ಬಂದರೆ, ನಾನು ನಿನ್ನನ್ನು 55 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕುತ್ತೇನೆ” ಎಂದು ಪತಿಗೆ ಹೇಳಿದ್ದಳು ಎಂದು ವರದಿಯಾಗಿದೆ.
ಇದನ್ನೂ ಓದಿ;Kodagu Rain: ಕೊಡಗು ಜಿಲ್ಲೆಯ ಮಳೆ ವಿವರ ಹೇಗಿದೆ? ಹಾರಂಗಿ ಜಲಾಶಯದ ನೀರಿನ ಮಟ್ಟ ಎಷ್ಟು?
