Bangalore: ವಿದ್ಯುತ್ ಸಂಪರ್ಕ ಹಠಾತ್ ಕಡಿತಗೊಂಡ ಪರಿಣಾಮ ಸ್ಕೈವಾಕ್‌ನ ಲಿಫ್ಟ್‌ನಲ್ಲಿ ಸಿಲುಕಿ ಮಹಿಳೆಯೊಬ್ಬರನ್ನು ಚಂದ್ರಾಲೇಔಟ್ ಠಾಣೆ ಹೊಯ್ಸಳ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ನಾಗರಬಾವಿ ಬಸ್ ನಿಲ್ದಾಣದ ಸ್ಕೈವಾಕ್‌ನ ಲಿಫ್ಟ್‌ನಲ್ಲಿ ಹೊಯ್ಸಳ ನಗರದ ನಾಗಮ್ಮ ಸಿಲುಕಿದ್ದ ಮಹಿಳೆ. ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು ಕಳೆದ ಗುರುವಾರ ನಾಗರಬಾವಿ ಹತ್ತಿರ ಮನೆಗೆಲಸಕ್ಕೆ ಹೋಗಿ ಮನೆಗೆ ಮರಳುತ್ತಿದ್ದರು. ಆಗ ನಾಗರಬಾವಿ ವೃತ್ತದಲ್ಲಿ ಸ್ಕೈವಾಕ್‌ನ ಲಿಫ್ಟ್‌ಗೆ ಹತ್ತಿದ್ದು, ಕೆಲ ಸೆಕೆಂಡ್‌ನಲ್ಲಿಯೇ ಲಿಫ್ಟ್‌ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಲಿಫ್ಟ್ ಅರ್ಧಕ್ಕೆ ನಿಂತು ಬಿಟ್ಟಿದೆ. ನಾಗಮ್ಮ ಅವರು ಹೆದರಿ ಜೋರಾಗಿ ಕೂಗಿದ್ದಾರೆ. ಆ ಕೂಗಾಟ ಕೇಳಿ ಪೊಲೀಸ್ ನಿಯಂತ್ರಣ ಕೊಠಡಿ ನಮ್ಮ 112 ಗೆ ಕರೆ ಮಾಡಿದ್ದಾರೆ.
ಕೂಡಲೇ ಚಂದ್ರಾಲೇಔಟ್ ಠಾಣೆ ಹೊಯ್ಸಳಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಹೋಗಿದೆ. ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಹೊಯ್ಸಳ ವಾಹನದಲ್ಲಿ ಎಎಸ್‌ಐ ರವೀಂದ್ರ ಹಾಗೂ ಎಚ್‌ಸಿ ನಂಜೇಶ್ ಧಾವಿಸಿ ರಕ್ಷಣೆ ಮಾಡಿದ್ದಾರೆ.
