Bengaluru: ಈಗಿನ ಕಾಲದಲ್ಲಿ ಯಾರನ್ನು ಕೂಡ ನಂಬಲು ಸಾಧ್ಯವಿಲ್ಲ.ಅಂತದ್ದರಲ್ಲಿ ಆನ್ಲೈನ್ ನಲ್ಲಿ ಪರಿಚಯವಾಗಿ ನಂಬಿಕೆ ಇಟ್ಟು ದುಡ್ಡು ಕೊಟ್ಟರಂತೂ ಮುಗಿತು ಕಥೆ. ಹಣ ಹೋಗುತ್ತದೆಯೇ ಹೊರತು ಯಾವುದೇ ರೀತಿಯ ಪ್ರಯೋಜನವಂತೂ ಆಗುವುದಿಲ್ಲ.
ಹೌದು, ಬೆಂಗಳೂರಿನ ಒಂದು ದಂಪತಿ ತಮ್ಮ ಮಗುವನ್ನು ನೋಡಿಕೊಳ್ಳಲೆಂದು ಕೆಲಸದವರನ್ನು ಹುಡುಕುತ್ತಿರುವಾಗ, ಸಮೀಕ್ಷಾ ಮೇಡ್ ಸರ್ವಿಸ್ ಆಪ್ ನಲ್ಲಿ ಸಚಿನ್ ಎಂಬಾತನ ಪರಿಚಯವಾಗಿದ್ದು, ಮನೆಕೆಲಸದವಳನ್ನು ಕೆಲಸಕ್ಕೆ ಕಳಿಸೋದಾಗಿ ಬಿಮಲಾ ಎಂಬ ಯುವತಿಯ ಪ್ರೊಫೈಲನ್ನ ರಶ್ಮಿಯವರ ಮೊಬೈಲ್ ಗೆ ಕಳಿಸಿರುತ್ತಾನೆ.
ಬಿಮಲಾಳನ್ನೂ ದಂಪತಿಗಳು ಓಕೆ ಮಾಡಿದ ನಂತರ,ಆಕೆಯನ್ನು ಕಳಿಸಬೇಕಾದ್ರೆ ತಿಂಗಳಿಗೆ 16 ಸಾವಿರ ಹಣದಂತೆ 3 ತಿಂಗಳ ಮುಂಗಡ ಸಂಬಳವನ್ನು ಮಧ್ಯವರ್ತಿ ಸಚಿನ್ ಕೇಳಿರುತ್ತಾನೆ. ಬಿಮಲಾ ಎಂಬಾಕೆ ಮನೆಕೆಲಸಕ್ಕೆ ಅಪಾರ್ಟ್ಮೆಂಟ್ ಫ್ಲಾಟ್ ಗೆ ಬಂದಾಗ ಆನ್ಲೈನ್ ನಲ್ಲಿ ಎರಡು ತಿಂಗಳ ಸಂಬಳ ಮುಂಗಡವಾಗಿ ರಶ್ನಿ ಪಾವತಿಸಿದ್ರು. ಒಂದು ತಿಂಗಳ ಸಂಬಳನ್ನು ಕ್ಯಾಶ್ ರೂಪದಲ್ಲಿ ಕೊಟ್ಟಿದ್ರು.
ಹಣದ ಪಾವತಿ ಆಗುತ್ತಾ ಇದ್ದಂತೆ ಕೆಲಸದಾಕೆ ಎಸ್ಕೇಪ್ ಆಗಿದ್ದು, ಮಧ್ಯವರ್ತಿ ಕೂಡ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಈ ಕುರಿತಾಗಿ ದಂಪತಿಗಳು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
