Home » Karkala: ಕಾರ್ಕಳ: ಬ್ಯಾಂಕಿಗೆ ಹೋಗಿ ಬರ್ತೇನೆಂದು ಹೇಳಿದವಳ ಪತ್ತೆಯಿಲ್ಲ! ದೂರು ದಾಖಲು!

Karkala: ಕಾರ್ಕಳ: ಬ್ಯಾಂಕಿಗೆ ಹೋಗಿ ಬರ್ತೇನೆಂದು ಹೇಳಿದವಳ ಪತ್ತೆಯಿಲ್ಲ! ದೂರು ದಾಖಲು!

by ಕಾವ್ಯ ವಾಣಿ
0 comments
Missing Case

Karkala: ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಹೇಳಿದ ಯುವತಿಯೋರ್ವಳು ಮನೆಗೆ ಹಿಂದಿರುಗದೆ ನಾಪತ್ತೆಯಾದ ಘಟನೆ ಕಾರ್ಕಳದ (Karkala) ಮಿಯ್ಯಾರಿನಲ್ಲಿ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಮಿಯ್ಯಾರು ಮಂಜಿರಾಯಿ ಕಂಬಳ ಬಳಿ ನಿವಾಸಿ ಹದಿನೆಂಟು ವರ್ಷದ ಅಮೂಲ್ಯ ನಾಪತ್ತೆಯಾದ ಯುವತಿಯಾಗಿದ್ದಾಳೆ. ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟು ಮನೆಗೂ ಬಾರದೆ, ಬ್ಯಾಂಕಿಗೂ ಹೋಗದೆ ನಾಪತ್ತೆಯಾಗಿದ್ದಾಳೆ. ಆಕೆಯ ಮೊಬೈಲ್ ಗೆ ಕಾಲ್ ಮಾಡಿದಾಗ ತಾನು ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದ್ದು ನಂತರ ಯಾವುದೇ ಮಾಹಿತಿ ನೀಡಿಲ್ಲ. ಅವಳ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

You may also like