Home » ಮಹಿಳೆಯೊಂದಿಗೆ ಅಸಭ್ಯ ವರ್ತನೆ | ವ್ಯಕ್ತಿಗೆ ಯರ್ರಾಬಿರ್ರಿ ಚಪ್ಪಲಿ ಸೇವೆ ಮಾಡಿದ ಮಹಿಳೆಗೆ ಸಾಥ್ ನೀಡಿದ ಗ್ರಾಮಸ್ಥರು

ಮಹಿಳೆಯೊಂದಿಗೆ ಅಸಭ್ಯ ವರ್ತನೆ | ವ್ಯಕ್ತಿಗೆ ಯರ್ರಾಬಿರ್ರಿ ಚಪ್ಪಲಿ ಸೇವೆ ಮಾಡಿದ ಮಹಿಳೆಗೆ ಸಾಥ್ ನೀಡಿದ ಗ್ರಾಮಸ್ಥರು

by ಹೊಸಕನ್ನಡ
0 comments

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕು ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

ಪ್ರಕಾಶ ಪೂಜಾರ ಎಂಬ ವ್ಯಕ್ತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಈ ದೃಶ್ಯವನ್ನು ಮೊಬೈಲ್‌ನ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಮೆರವಣಿಗೆ ಮಾಡುವಾಗ ಮಹಿಳೆಯೊಬ್ಬಳು ಚಪ್ಪಲಿಯಿಂದ ಮುಖ ಮುಸುಡಿ ನೋಡದೇ ಥಳಿಸಿರುವ ದೃಶ್ಯ ಕೂಡ ವೀಡಿಯೋದಲ್ಲಿದೆ.

ಊರಿಡೀ ಆತನಿಗೆ ಥಳಿಸುತ್ತಲೇ ಮೆರವಣಿಗೆ ಮಾಡಲಾಗಿದೆ. ಸುಮಾರು ಎಂಟರಿಂದ ಹತ್ತು ಜನ ಸೇರಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಇದರ ಮಧ್ಯೆ ದಲಿತ ವ್ಯಕ್ತಿ ಮೇಲೆ ಸವರ್ಣಿಯರಿಂದ ದೌರ್ಜನ್ಯ ಎಂಬ ಮರು ಆರೋಪವೂ ಕೇಳಿಬಂದಿದೆ.

You may also like

Leave a Comment