Home » Sagara: ನಾಗರ ಪಂಚಮಿಯಂದೇ ಹಾವು ಕಡಿದು ಬಾಣಂತಿ ಸಾವು !!

Sagara: ನಾಗರ ಪಂಚಮಿಯಂದೇ ಹಾವು ಕಡಿದು ಬಾಣಂತಿ ಸಾವು !!

0 comments
Sagara

Sagara: ನಿನ್ನೆ(ಆ 9) ರಾಜ್ಯಾಧ್ಯಂತ ಸಡಗರ, ಸಂಭ್ರಮದಿಂದ ನಾಗರ ಪಂಚಮಿಯನ್ನು ಆಚರಿಸಲಾಗಿದೆ. ಹುತ್ತಕ್ಕೆ ಹಾಲೆರೆದು ಜನ ನಾಗಾರಾಧನೆ ಮಾಡಿದ್ದಾರೆ. ಇಂತಹ ನಾಗರ ಪಂಚಮಿ ದಿನದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಸಾವನ್ನಪ್ಪಿರುವಂತ ಘಟನೆ ಸಾಗರ ತಾಲ್ಲೂಕಲ್ಲಿ ನಡೆದಿದೆ.

ಹೌದು, ಶಿವಮೊಗ್ಗ ಜಿಲ್ಲೆಯ ಸಾಗರ(Sagara) ತಾಲ್ಲೂಕಿನ ಹುತ್ತಾದಿಂಬ(Huttadimba) ಗ್ರಾಮದಲ್ಲಿ ನಾಗರ ಪಂಚಮಿಯ(Nagara Panchami) ಇಂದಿನ ದಿನದಂದೇ ಬಾಣಂತಿಯಾಗಿದ್ದಂತ ರಂಜಿತಾ(22) ಎಂಬುವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ರಂಜಿತಾಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ ಕುಸಿದು ಬಿದ್ದಿದ್ದಳು. ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾಳೆ.

You may also like

Leave a Comment