Home » Women’s Asia Cup: ಟೀಂ ಇಂಡಿಯಾ ಪಟ್ಟಿ ರಿಲೀಸ್, ಈ ದಿನ ನಡೆಯಲಿದೆ ಇಂಡಿಯಾ- ಪಾಕ್ ಫೈಟ್ !!

Women’s Asia Cup: ಟೀಂ ಇಂಡಿಯಾ ಪಟ್ಟಿ ರಿಲೀಸ್, ಈ ದಿನ ನಡೆಯಲಿದೆ ಇಂಡಿಯಾ- ಪಾಕ್ ಫೈಟ್ !!

0 comments

Women’s Asia Cup: ಜುಲೈ 19 ರಿಂದ ಆರಂಭವಾಗಲಿರುವ ಮಹಿಳೆಯರ ಏಷ್ಯಾಕಪ್​ಗೆ(Women’s Asia Cup) 15 ಸದಸ್ಯರ ಭಾರತದ ಮಹಿಳಾ ಆಟಗಾರ್ತಿಯರ ಪಡೆಯನ್ನು ಬಿಸಿಸಿಐ(BCCI) ಪ್ರಕಟಿಸಿದೆ. ಪಟ್ಟಿ ಇಲ್ಲಿದೆ ನೋಡಿ.

 

ಏಷ್ಯಾಕಪ್ ಭಾರತ ಮಹಿಳಾ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ದಯಾಲನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ ಮತ್ತು ಸಂಜನಾ ಸಂಜೀವನ್.

 

ಜುಲೈ 19 ರಿಂದ ಆರಂಭವಾಗಲಿರುವ ಮಹಿಳೆಯರ ಏಷ್ಯಾಕಪ್ ಜುಲೈ 28ರವರೆಗೆ ನಡೆಯಲ್ಲಿದೆ. 8 ತಂಡಗಳ ನಡುವೆ ನಡೆಯಲ್ಲಿರುವ ಟಿ20 ಏಷ್ಯಾಕಪ್ ಪಂದ್ಯಾವಳಿಗೆ ಶ್ರೀಲಂಕಾದ(Shrilanka) ದಂಬುಲ್ಲಾ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ನೇಪಾಳ ಮತ್ತು ಯುಎಇ ತಂಡಗಳು ಸ್ಥಾನ ಪಡೆದಿವೆ. ಜುಲೈ 19 ರಂದು ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದು ಮೊದಲ ಪಂದ್ಯವೇ ರೋಚಕವಾಗಿರಲಿದೆ.

You may also like

Leave a Comment