Home » Bannerghatta National Park: ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಕೃತಕ ಕಾಲು ಜೋಡಣೆ ಯಶಸ್ವಿ!

Bannerghatta National Park: ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಕೃತಕ ಕಾಲು ಜೋಡಣೆ ಯಶಸ್ವಿ!

0 comments

Bannerghatta National Park: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park), ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲನ್ನು ಯಶಸ್ವಿಯಾಗಿ ಜೋಡಣೆ ಮಾಡಿರುವ ಅಪರೂಪದ ಘಟನೆ ನಡೆದಿದೆ.

2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿದ ವೇಳೆ ಹಿಂಬದಿಯ ಎಡಗಾಲು ಮುರಿದು ಕರಡಿ ನರಳಾಡುತ್ತಿತ್ತು. ಗಾಯಗೊಂಡಿದ್ದ ವಸಿಕರನ್ ಅನ್ನು ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ:Kitchen Hacks: ಕರಿಬೇವಿನ ಎಲೆಗಳನ್ನು ತಿಂಗಳುಗಳ ಕಾಲ ಹೀಗೆ ಸಂಗ್ರಹಿಸಿಡಿ; ಫ್ರೆಶ್ ಆಗಿರುತ್ತೆ!

ಇದೀಗ ವಸಿಕರನ್ ಎಂಬ ಕರಡಿಗೆ ವೈಲ್ಡ್ ಲೈಫ್ SOS ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ (Forest Deparment) ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ಕೈಗೊಂಡಿದ್ದ ಕೃತಕ ಕಾಲು ಜೋಡಣೆ ಕಾರ್ಯ ಯಶಸ್ವಿಯಾಗಿದ್ದು, ಸದ್ಯ ಇದೀಗ ವಸಿಕರನ್ ಕರಡಿ ಕೃತಕ ಕಾಲಿನಿಂದ ಮೊದಲಿನ ಹಾಗೆ ಓಡಾಡುತ್ತಿದೆ.

You may also like