Home » ರೈಲಲ್ಲಿ ಮೈಮೇಲೆ ಪ್ಲಾಸ್ಟಿಕ್ ಕವರ್ ಹಾಕಿ ಬಾಳೆಹಣ್ಣು ತಿಂದ ಪೋರಿ | ಅಷ್ಟಕ್ಕೂ ಹೀಗೇಕೆ ಮಾಡಿದಳು?

ರೈಲಲ್ಲಿ ಮೈಮೇಲೆ ಪ್ಲಾಸ್ಟಿಕ್ ಕವರ್ ಹಾಕಿ ಬಾಳೆಹಣ್ಣು ತಿಂದ ಪೋರಿ | ಅಷ್ಟಕ್ಕೂ ಹೀಗೇಕೆ ಮಾಡಿದಳು?

0 comments

ಮನುಷ್ಯರು ಬುದ್ಧಿ ಜೀವಿಗಳು ಆಗಿರುವ ಕಾರಣ ಏನು ಮಾಡಿದರೂ ಅದರ ಹಿಂದೆ ಒಂದು ಬಲವಾದ ಕಾರಣ ಇರುವುದು ಸಹಜ ಆದರೆ ಕೆಲವೊಮ್ಮೆ ತಮ್ಮ ವಿಚಿತ್ರ ನಡವಳಿಕೆಯಿಂದಲೇ ಕೆಲವರು ಗಮನ ಸೆಳೆದುಬಿಡುತ್ತಾರೆ. ಮಾತ್ರವಲ್ಲ, ಅದೇ ಕಾರಣಕ್ಕೆ ದೊಡ್ಡ ಸುದ್ದಿಯೂ ಆಗುತ್ತಾರೆ.

ಇದೆಲ್ಲವನ್ನು ಮೀರಿ ಇಲ್ಲೊಬ್ಬಳು ಮಹಿಳೆ ಕೂಡ ತನ್ನ ವಿಚಿತ್ರ ನಡವಳಿಕೆಯಿಂದ ಗಮನ ಸೆಳೆದಿದ್ದಾಳೆ. ಅಷ್ಟಕ್ಕೂ ಈಕೆ ಮಾಡಿದ್ದೇನೆಂದರೆ, ಪ್ಲಾಸ್ಟಿಕ್ ಚೀಲದೊಳಗೆ ಇಡೀ ದೇಹವನ್ನೂ ತೂರಿಕೊಂಡು, ಪ್ಲಾಸ್ಟಿಕ್ ಕವರ್‌ನೊಳಗಿದ್ದು ಬಾಳೆಹಣ್ಣನ್ನು ಸೇವಿಸಿದ್ದಾಳೆ. ಅಲ್ಲದೆ ಈಕೆ ರೈಲೊಂದರಲ್ಲಿ ಹೀಗೆ ಮಾಡಿದ್ದರಿಂದ ಬಹಳಷ್ಟು ಜನರ ಗಮನ ಸೆಳೆದಿದ್ದಾಳೆ.

ಚೀನಾದ ಹುಬೇ ಎಂಬಲ್ಲಿನ ಸಬ್‌ವೇ ಟ್ರೇನ್‌ನಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದ್ದು, ಪ್ರಯಾಣಿಕರೊಬ್ಬರು ಅದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇಲ್ಲಿನ ಕೊರೋನ ಸೋಂಕಿನ ಕಾರಣಕ್ಕೆ ಸಾಕಷ್ಟು ನಿರ್ಬಂಧಗಳಿದ್ದರೂ ಈಕೆಯದ್ದು ಅತಿರೇಕ ಎಂಬುದಾಗಿ ಕೆಲವರು ಹೇಳಿಕೊಂಡಿದ್ದು, ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

ಇನ್ನು ವಿಡಿಯೋ ನೋಡಿ ವೀಕ್ಷಕರು ಒಂದು ಕಡೆ ದಂಗಾದರೂ ಸಹ ಇದೊಂದು ಹಾಸ್ಯಸ್ಪದ ವಿಚಾರವು ಹೌದು ಎಂದು ಸುಮ್ಮನಾಗಿದ್ದಾರೆ.

You may also like

Leave a Comment