Home » Independence Day: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿ – ಮೂರ್ನಾಡುವಿನ ಯಶಸ್ ರೈ ಆಯ್ಕೆ

Independence Day: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿ – ಮೂರ್ನಾಡುವಿನ ಯಶಸ್ ರೈ ಆಯ್ಕೆ

0 comments

Independence Day: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಮೂರ್ನಾಡು ಕೊಡOಬುರುವಿನ ಇವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿವರೆಗಿನ ಈ ಅವಕಾಶದಲ್ಲಿ ಕರ್ನಾಟಕ ರಾಜ್ಯದಿಂದ ಈ ಬಾರಿ ಕೊಡಗು ಹಾಗೂ ದಕ್ಸಿಣ ಕನ್ನಡ ಜಿಲ್ಲೆ ಈ ಸ್ಥಾನವನು ಪಡೆದು ಕೊಂಡಿದೆ.

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ನೆಹರು ಯುವಕೇಂದ್ರದ ಮೈ ಭಾರತ್ ಪೋರ್ಟಲ್ ಮೂಲಕ ನೋಂದಣಿಗೊಂಡ ಯುವಕರಲ್ಲಿ ಇವರು ಆಯ್ಕೆಗೊಂಡಿರುತ್ತಾರೆ. ಇವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿಗಳಾಗಿ ಕರ್ನಾಟಕದಿಂದ ಪಾಲ್ಗೊಳ್ಳಲಿದ್ದಾರೆ. ಶ್ರೀ ಬಿ ಎನ್. ಲವಕುಮಾರ್ ಹಾಗೂ ಜಯಂತಿ ಬಿ. ಬಿ.ಅವರ ದ್ವಿತೀಯ ಪುತ್ರರಾಗಿರುವ ಇವರು ಸುಳ್ಳ ಕೆ. ವಿ ಜಿ. ಇಂಜಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.

ಸನ್ಮಾನ್ಯ ಪ್ರಧಾನ ಮಂತ್ರಿಗಳ ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿರುವುದು ಕೊಡಗು ಜಿಲ್ಲೆಯ ಯುವ ಜನೆತೆಗೆ ಹೆಮ್ಮೆ ತಂದಿದೆ. ಅಲ್ಲದೆ ಇತ್ತೀಚಿನ ಈ ವಯಸ್ಸಿನ ಯುವ ಸಮೂಹ ಜಿಲ್ಲಾ ಯುವ ಒಕ್ಕೂಟ ಮುಖಂತಾರ ರಾಷ್ಟ್ರ ಯುವಜನೋತ್ಸವ ಸಾoಸ್ಕೃತಿಕದಂತಹ ಕಾರ್ಯಕ್ರಮದಲ್ಲಿ ಕೊಡಗನ್ನು ಪ್ರತಿನಿಧಿಸಿರುವುದು ಹೆಮ್ಮೆ ತಂದಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಪಿ. ಪಿ ಸುಕುಮಾರ್ ತಿಳಿಸಿದ್ದಾರೆ

You may also like