Actor yash: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವ್ರು ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಅದಕ್ಕೆ PA ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ.
P ಅಂದ್ರೆ ಪುಷ್ಪ A ಅಂದ್ರೆ ಅರುಣ್ ಕುಮಾರ್ ಅನ್ನೋದು ಇದರ ಅರ್ಥವಾಗಿದೆ. ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದ್ದು ಅಕ್ಷಯ ತೃತೀಯ ದಿನವಾದ ಇಂದು ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಇವರ ಮೊದಲ ಪ್ರಯತ್ನಕ್ಕೆ ‘ಕೊತ್ತಲವಾಡಿ’ ಎಂಬ ಶೀರ್ಷಿಕೆ ಇಡಲಾಗಿದ್ದು ಚಿತ್ರಕ್ಕೆ ಶ್ರೀರಾಜ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕರಾದ ಕೆ.ವಿ ರಾಜು, ರವಿ ಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿದ್ದಾರೆ.
